ಮೇಷ : ಕಾರ್ಯರಂಗದಲ್ಲಿ ಕಠಿಣ ಸವಾಲುಗಳಿಗೆ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಗೃಹದಲ್ಲಿ ಮಡದಿಯ ಸಹಕಾರ, ಪ್ರೀತಿ, ವಿಶ್ವಾಸ ನಿಮಗೆ ನೆಮ್ಮದಿ ತರಲಿದೆ. ಆರ್ಥಿಕವಾಗಿ ವ್ಯವಹಾರದಲ್ಲಿ ಚೇತರಿಕೆ ಇರುತ್ತದೆ.
ವೃಷಭ : ಕೌಟುಂಬಿಕವಾಗಿ ಆಗಾಗ ಖರ್ಚುವೆಚ್ಚಗಳು ಅಧಿಕವಾದಾವು. ಕಂಕಣಬಲಕ್ಕಾಗಿ ಯುವಕರು ಹೆಚ್ಚಿನ ಪ್ರಯತ್ನ ಪಡಬೇಕಾದೀತು. ಆರೋಗ್ಯದ ಬಗ್ಗೆ ಸುಧಾರಣೆ ತೋರಿಬರಲಿದೆ. ನ್ಯಾಯಲಯದ ಕಾರ್ಯ ಮುನ್ನಡೆ ತರಲಿದೆ.
ಮಿಥುನ : ಸ್ವತಂತ್ರ ವ್ಯವಹಾರಗಳಿಗೆ ಸಕಾಲವಿದು. ದಾಂಪತ್ಯದಲ್ಲಿ ಕೆಲವೊಮ್ಮ ಸಮಸ್ಯೆಗಳು ತೋರಿಬಂದಾವು. ವೃತ್ತಿ ರಂಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ ಇದೆ. ನಿರುದ್ಯೋಗಿಗಳು ಉದ್ಯೋಗವನ್ನು ಹೊಂದಿಯಾರು.
ಕರ್ಕ : ನಿರುದ್ಯೋಗಿಗಳು ಕರ್ತವ್ಯದ ಕಡೆಗೆ ಗಮನವಿಟ್ಟು ಉದ್ಯೋಗದ ಕಡೆ ಪ್ರಯತ್ನಿಸಬೇಕು. ಮನೆಯಲ್ಲಿ ಶುಭಮಂಗಲ ಕಾರ್ಯಗಳ ಸಂಭ್ರಮವಿದೆ. ವೃತ್ತಿರಂಗದಲ್ಲಿ ಅಧಿಕಾರಿ ವರ್ಗಕ್ಕೆ ಮುಂಭಡ್ತಿ ತಂದೀತು.
ಸಿಂಹ : ಕಾರ್ಯರಂಗದಲ್ಲಿ ಹೊಂದಾಣಿಕೆ ಅತೀ ಅಗತ್ಯವಿದೆ. ದೇವತಾಕಾರ್ಯಗಳಿಗಾಗಿ ಸಂಚಾರವಿದೆ. ವೃತ್ತಿರಂಗದಲ್ಲಿ ಕಾರ್ಯಒತ್ತಡಗಳು ಸಮಸ್ಯೆ ತರಲಿದೆ. ಅದನ್ನು ಆತ್ಮವಿಶ್ವಾಸದಿಂದ ಎದುರಿಸುವುದು.
ಕನ್ಯಾ : ಹಿರಿಯರ ಅಪಸ್ವರವಿದ್ದರೂ ನಿಮ್ಮ ಕಾರ್ಯದ ಬಗ್ಗೆ ನೀವೇ ಯೋಚಿಸಿ ಮುನ್ನಡೆಯುವುದುಅಗತ್ಯವಿದೆ. ಆರ್ಥಿಕವಾಗಿ ಆಗಾಗ ಧನಾಗಮನದಿಂದ ಕೊಂಚ ಸಮಾಧಾನವೂ ಮೂಡಿಬಂದಿತು.
ತುಲಾ : ಮುಖ್ಯವಾಗಿ ಎಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ವಿಶ್ರಾಂತಿ ಪಡಿಯುವುದು ಅಗತ್ಯವಿದೆ. ಅವಿವಾಹಿತರಿಗೆ ಬೆಳವಣಿಗೆಗಳು ಕಂಡು ಬರಲಿದೆ. ಸಾಮಾಜಿಕ ರಂಗದಲ್ಲಿ ಜಾಗೃತೆ ಮಾಡಿರಿ.
ವೃಶ್ಚಿಕ : ಆರ್ಥಿಕವಾಗಿ ಸಂಕಷ್ಟಗಳು ಎದುರಾದರೂ ಅನಿರೀಕ್ಷಿತ ರೂಪದಲ್ಲಿ ಧನಾಗಮನವಿರುತ್ತದೆ. ಬಂಧುಮಿತ್ರರ ಆಗಮನ ಸಂತಸ ತರಲಿದೆ. ಆಗಾಗ ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆಗಳು ತೋರಿಬಂದು ಬೇಸರವಾದೀತು.
ಧನು : ವಿದ್ಯಾರ್ಥಿಗಳು ತಮ್ಮ ಪ್ರಯತ್ನ ಬಲದ ಫಲಿತಾಂಶವನ್ನು ಉತ್ತಮ ರೀತಿಯಲ್ಲಿ ಪಡೆಯಲಿದ್ದಾರೆ. ಶುಭಮಂಗಲ ಕಾರ್ಯಕ್ಕಾಗಿ ಓಡಾಟವಿರುತ್ತದೆ. ಆರ್ಥಿಕವಾಗಿ ಹೆಚ್ಚಿನ ಕಷ್ಟವು ಇರಲಾರದು. ಸಮಾಧಾನದಿಂದ ಇರುವುದು.
ಮಕರ : ದೂರ ಸಂಚಾರದ ಅವಕಾಶಗಳಿದ್ದರೂ ಕಾರ್ಯಭಂಗವಾಗಲಿದೆ. ಕುಟುಂಬಿಕರ ಮಂಗಲ ಕಾರ್ಯಕ್ಕೆ ಕರೆ ಬಂದೀತು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ದೇವತಾ ಕಾರ್ಯಗಳಿಗಾಗಿ ಖರ್ಚು ತೋರಿಬಂದೀತು.
ಕುಂಭ : ಬಂದ ಅವಕಾಶವನ್ನ ನಿರುದ್ಯೋಗಿಗಳು ಒಪ್ಪಿಕೊಳ್ಳುವುದು ಉತ್ತಮ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಅನಾವಶ್ಯಕ ನಿಷ್ಠುರವಾದೀತು. ನಿಮ್ಮಿಷ್ಟದಂತೆ ಚಿಂತಿತ ಕಾರ್ಯವು ಕಾರ್ಯಗತವಾಗಲಿದೆ.
ಮೀನ : ಸಾಂಸಾರಿಕವಾಗಿ ಮಡದಿಯ ಸಹಕಾರ ಸಫಲವಾಗಲಿದೆ. ವಿದ್ಯಾರ್ಥಿಗಳಿಗೆ ಸಹಕಾರದಿಂದ ಉನ್ನತ ವ್ಯಾಸಂಗಕ್ಕೆ ಪೂರಕವಾದೀತು. ಆರೋಗ್ಯಕ್ಕಾಗಿ ಆಗಾಗ ತಪಾಸಣೆ ಅಗತ್ಯವಿದೆ. ಜಾಗೃತೆ ವಹಿಸುವುದು.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.