ಮೇಷ: ವಿಲಾಸಿ ಜೀವನ ಧನವ್ಯಯಕ್ಕೆ ಕಾರಣವಾದೀತು. ವೃತ್ತಿ ರಂಗದಲ್ಲಿ ನಿಮ್ಮ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ. ಮನೆ ಬದಲಾವಣೆ ಅಥವಾ ಗೃಹ ನಿರ್ಮಾಣಕ್ಕೆ ಸಕಾಲ. ನಿರುದ್ಯೋಗಿಗಳಿಗೆ ಒಳ್ಳೆ ಉದ್ಯೋಗ ಸಿಗಲಿದೆ.

ವೃಷಭ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಪ್ರಶಂಸೆ ಸಲ್ಲಲಿದೆ. ಯೋಗ್ಯ ವಯಸ್ಕರು ಕಂಕಣ ಬಲ ಹೊಂದಲಿದ್ದಾರೆ. ಸರ್ಕಾರ ಕಾರ್ಯಗಳು ನಿರ್ವಿಘ್ನತೆಯಿಂದ ಮುಕ್ತಗೊಳ್ಳಲಿದೆ. ಆರೋಗ್ಯದಲ್ಲಿ ಜಾಗೃತೆ ಇರಲಿ.
ಮಿಥುನ : ನಿಮ್ಮ ಕೆಲಸ ಕಾರ್ಯಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಿರಿ. ಕುಟುಂಬದಲ್ಲಿ ಸಂಬಂಧವನ್ನು ಗಟ್ಟಿಯಾಗಿರಿಸಲು ಮನಸ್ಸು ಮಾಡಿರಿ. ಕುಟುಂಬ ಸದಸ್ಯರ ಅಭಿಪ್ರಾಯವನ್ನು ಯೋಚಿಸಿ, ಚಿಂತಿಸಿ ಮನ್ನಣೆ ನೀಡಿರಿ.
ಕರ್ಕ : ಅವಿವಾಹಿತರು ಅಸ್ಪಷ್ಟ ನಿಲುವನ್ನು ಹೋಗಲಾಡಿಸಿದ್ದಲ್ಲಿ ಕಂಕಣಬಲದ ಸಾಧ್ಯತೆ ಇದೆ. ಮನೆಯಲ್ಲಿ ಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗಲಿದೆ. ನೆನೆಗುದಿಗೆ ಬಿದ್ದಿದ್ದ ನ್ಯಾಯಾಲಯದ ಕಾರ್ಯವು ಚಾಲನೆಗೆ ಬರಲಿದೆ.
ಸಿಂಹ : ವೃತ್ತಿರಂಗದಲ್ಲಿ ಹಿತಶತ್ರುಗಳ ಕಾಟ ಕಿರಿಕಿರಿ ಎನ್ನಿಸಲಿದೆ. ವಾಹನ ಖರೀದಿಗೆ ಸಕಾಲ. ನಿರುದ್ಯೋಗಿಗಳಿಗೆ ನಾನಾ ರೀತಿಯ ಅವಕಾಶದಿಂದ ಗೊಂದಲವಾದೀತು. ವೃತ್ತಿರಂಗದಲ್ಲಿ ನೆಮ್ಮದಿ ಕಂಡುಬರಲಿದೆ.
ಕನ್ಯಾ: ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಹಿನ್ನಡೆಯಾದೀತು. ವೃತ್ತಿರಂಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ ಇದೆ. ನೀವು ಬಯಸದಿದ್ದರೂ ಬದಲಾವಣೆ ನಡೆದು ಹೋಗಲಿದೆ. ಕಾರ್ಯರಂಗದ ಕಠಿಣ ಸವಾಲನ್ನು ಎದುರಿಸಿ.
ತುಲಾ : ಅವಿವಾಹಿತರಿಗೆ ವಿವಾಹವಾಗಲು ವೈವಾಹಿಕ ಭಾಗ್ಯವಿದ್ದರೂ ಸಮಯ ಕೂಡಿ ಬರಬೇಕೆಂಬುದು ನೆನಪಿಡಿ. ನಿಮ್ಮ ಕರ್ತವ್ಯದ ಕಡೆ ಗಮನವಿಟ್ಟು ಮುನ್ನಡೆಯಿರಿ. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ.
ವೃಶ್ಟಿಕ : ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಸಮಾಧಾನ ವಾತಾವರಣ ನೆಮ್ಮದಿ ತರುವುದು. ಹಿತಶತ್ರುಗಳು ನಿಮ್ಮ ಬಗ್ಗೆ ಅನಾವಶ್ಯಕವಾಗಿ ಕೆಟ್ಟ ವಿಚಾರವನ್ನು ಪ್ರಚಾರ ಮಾಡಿಯಾರು.
ಧನು : ಬಂದ ಅವಕಾಶಗಳನ್ನು ಪಡೆದುಕೊಂಡಲ್ಲಿ ನಿಮ್ಮ ಕಾರ್ಯಸಾಧನೆಯಾಗಲಿದೆ. ವಾಹನ ಸಂಚಾರದಲ್ಲಿ ಜಾಗೃತೆ ವಹಿಸಿರಿ. ನೌಕರ ವರ್ಗದವರಿಗೆ ಉತ್ತಮ ಧನಾಗಮನವಿರುತ್ತದೆ. ಕ್ರಯ ವಿಕ್ರಯವು ಲಾಭಕರವಿರುತ್ತದೆ.
ಮಕರ : ಬಂಧುಮಿತ್ರರಿಂದ ಶುಭವಾರ್ತೆ ಇರುತ್ತದೆ. ಗೃಹನಿರ್ಮಾಣ ಕಾರ್ಯಗಳಿಗಾಗಿ ಧನವ್ಯಯವಾದೀತು. ಅಧಿಕಾರಿ ವರ್ಗಕ್ಕೆ ಸಹೋದ್ಯೋಗಿಗಳ ಅಸಹಕಾರ ನೆಮ್ಮದಿಗೆ ಭಂಗ ತಂದೀತು. ಆಹಾರದಲ್ಲಿ ಜಾಗೃತೆಯಾಗಿರಿ.
ಕುಂಭ : ಆಗಾಗ ಅಡೆತಡೆಯಿಂದಲೇ ನಿಮ್ಮ ಕಾರ್ಯಸಾಧನೆಯಾದೀತು. ಮನೆಯಲ್ಲಿ ಅತಿಥಿಗಳ ಆಗಮನದಿಂದ ಸಂತಸ ತಂದೀತು. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ವ್ಯವಹಾರದಲ್ಲಿ ಜಾಗೃತೆ ಮಾಡಿರಿ.
ಮೀನ: ಆಗಾಗ ಸಂಚಾರಗಳು ದೇಹಾರೋಗ್ಯಕ್ಕೆ ಸಮಸ್ಯೆ ತಂದೀತು. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದ ಉತ್ತಮ ಫಲಿತಾಂಶ ದೊರೆಯಲಿದೆ. ಸರ್ಕಾರಿ ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಯಾರು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.