ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ತಾಂಡವವಾಡುತ್ತಿದೆ. ಈ ನಿಟ್ಟಿನಲ್ಲಿ ಮಹಾಮಾರಿ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೋಲಾರ ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ೨೦೦೦ ಗಡಿಯತ್ತ ಬಂದು ನಿಂತಿದೆ. ಇದೆ ಸಂದರ್ಭದಲ್ಲಿ ಗಣಪತಿ ಹಬ್ಬ ಬಂದಿದೆ. ಕೊವಿಡ್ ೧೯ ಸಂದರ್ಭದಲ್ಲಿ ಜನರು ಮನೆಯಲದಲ್ಲೇ ಗಣಪತಿ ಹಬ್ಬ ಆಚರಿಸುಂವತೆ ಸಲಹೆ ನೀಡಿದ್ದಾರೆ. ಇಂದು ಮಾತನಾಡಿದ ಜಿಲ್ಲಾಧಿಕಾರಿ ಸತ್ಯಭಾಮಾರವರು ಮನೆಯಲ್ಲಿ ಅರಿಶಿನ ಗಣೇಶ ಮೂರ್ತಿಯನ್ನು ಮಾಡಿ, ಮನೆಯಲ್ಲಿ ಎಲ್ಲರು ಸಂತೋಷದಿಂದ ಪೂಜಿಸಿ, ನಂತರ ಮನೆಯಲ್ಲೇ ವಿಸರ್ಜಿಸಿ ಎಂದು ಸಲಹೆ ನೀಡಿದರು. ಮನೆಯಲ್ಲೆ ಗಣಪತಿ ಪೂಜಿಸಿ ಮನೆಯಲ್ಲೇ ವಿಸರ್ಜನೆ ಮಾಡುವುದರಿಂದ ಪರಿಸರ ಮಾಲಿನ್ಯ ನಿರ್ಮೂಲನೆ ಮಾಡಬಹುದು ಹಾಗೂ ಕೊರೊನಾ ನಿಮ್ಮನ್ನು ಕಾಡದು ಎಂದು ಸಲಹೆ ನೀಡಿದರು.
ಕೋಲಾರದಲ್ಲಿ ಕಳೆದ ತಿಂಗಳಷ್ಟೆ ನೂತನ ಜಿಲ್ಲಾಡಳಿತ ಕಚೇರಿ ಉದ್ಘಾಟನೆಗೊಂಡಿದೆ. ಆದರೆ ಕಳಪೆ ಕಾಮಗಾರಿಯಿಂದ ಮೊನೆಯಷ್ಟೆ ನಿರ್ಮಾಣ ಗೊಂಡಿದ್ದ, ಕಾಂಪೋಂಡ್ ಗೋಡೆ ಕುಸಿದು ಬಿದಿದೆ. ನಿನ್ನೆ ಸಂಜೆ ಕೋಲಾರ ನಗರದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿತ್ತು. ಈ ಮಳೆಯಿಂದ ಜಿಲ್ಲಾಡಳಿತದ ಕಚೇರಿ ಮುಂಭಾಗದಲ್ಲಿರುವ ತಡೆಗೋಡೆ ಕುಸಿದು ಬಿದ್ದಿದೆ. ಸಿಮೇಂಟ್ ಇಟಿಗೆಯಿಂದ ಗೋಡೆ ನಿರ್ಮಿಸಿದ್ದು, ಕಲಪೆ ಕಾಮಗಾರಿಯಿಂದ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿದು ಬಿದ್ದಿದ್ದರು ಅಧಿಕಾರಿಗಳು ಕಂಡು ಕಾಣದಂತೆ ತಿರುಗಾಡುತ್ತಿದ್ದಾರೆ..
ಇಂದು ವಿಶ್ವ ಆನೆಗಳ ದಿನವಾಗಿರುವ ಹಿನ್ನೆಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆನೆ ಜೊತೆ ಇರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಬರೆದಿರುವ ದರ್ಶನ್, ಇಂದು ಆಗಸ್ಟ್ 12 ರಂದು ‘ವಿಶ್ವ ಆನೆ ದಿನ’ ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನಟ ಸಂಜಯ್ ದತ್ ನಿನ್ನೆಯಷ್ಟೇ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮರಳಿದ್ದರು. ಆದ್ರೆ ಇಂದು ಸಂಜಯ್‌ಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಮತ್ತೆ ಅಮೇರಿಕಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಂಜಯ್ ದತ್, ಚಿಕಿತ್ಸೆ ಪಡೆಯುವುದಕ್ಕಾಗಿ ನಾನು ಕೆಲಸದಿಂದ ಒಂದು ಚಿಕ್ಕ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕಾಳಜಿ ವಹಿಸಲು ನನ್ನ ಸಂಬಂಧಿಕರು ಮತ್ತು ಗೆಳೆಯರು ನನ್ನ ಬಳಿ ಇದ್ದಾರೆ. ನನ್ನ ಬಗ್ಗೆ ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಪ್ರೀತಿ, ಹಾರೈಕೆ ಆಶೀರ್ವಾದದಿಂದ ಆದಷ್ಟು ಬೇಗ ಮರಳಿ ಬರುತ್ತೇನೆ ಎಂದಿದ್ದಾರೆ.
