ಮೇಷ: ಭೂಸಂಬಂಧದ ವ್ಯವಹಾರಗಳು ಲಾಭಕರವಾಗಲಿದೆ. ಉದ್ಯೋಗ ವ್ಯವಹಾರಗಳಲ್ಲಿ ಕೆಲವೊಂದು ಅನುಕೂಲವಾಗಲಿದೆ. ಸಾರ್ವಜನಿಕ ರಂಗದಲ್ಲಿ ನಿಮ್ಮ ಸೇವೆ ಹಾಗೂ ಗುಣಗಳು ಗುರುತಿಸಲ್ಪಡುವುದು.

ವೃಷಭ: ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಮುಂದುವರೆಯಿರಿ. ವೃತ್ತಿರಂಗದಲ್ಲಿ ಸಮಾಧಾನ ತರಲಿದೆ. ಹಣಕಾಸಿನ ವ್ಯವಹಾರದಲ್ಲಿ ಅಡಚಣೆಗಳಿರುತ್ತದೆ. ಸ್ಥಿರ ಉದ್ಯೋಗಿಗಳಿಗೆ ಮುಂಭಡ್ತಿಯ ಸೂಚನೆ ಬರಲಿದೆ.
ಮಿಥುನ: ಬುದ್ಧಿಶಕ್ತಿ ಆಲೋಚನಾ ಶಕ್ತಿ ಉತ್ತಮವಿರುವ ನಿಮಗೆ ಸ್ವಲ್ಪ ಆತುರತೆ ಸಲ್ಲದು. ಉದ್ವೇಗವು ನಿಮಗೆ ಸರಿಯಲ್ಲ. ಉದ್ಯೋಗದಲ್ಲಿ ಅಲ್ಪಮಟ್ಟಿನ ಲಾಭವಿರುವುದು. ಖರ್ಚಿನ ಬಗ್ಗೆ ಚಿಂತೆ ಬೇಡ.
ಕರ್ಕ: ವ್ಯಾಪಾರ ವ್ಯವಹಾರಗಳಲ್ಲಿ ಪಾಲುದಾರರಿಂದ ಕಿರಿಕಿರಿಯು ಕಂಡುಬರಲಿದೆ. ಮನಸ್ಸಿಗೆ ನೋವಾಗುವ ಸ್ಥಿತಿಯು ಕಣ್ಣೆದುರೆ ಇರುವುದು. ಅದನ್ನು ಮನಸ್ಸಿಗೆ ತೆಗೆದುಕೊಳ್ಳದೇ, ಪಾಲಿಗೆ ಬಂದಿದ್ದು ಪಂಚಾಮೃತ ಎಂದಿಟ್ಟುಕೊಳ್ಳಿ.
ಸಿಂಹ: ಪತಿ ಹಾಗೂ ಮಕ್ಕಳಿಂದ ಸುಖವು ದೂರವಾಗಲಿದೆ. ಚಿಂತೆಯ ಗೂಡಾಗಲಿದೆ ಮನಸ್ಸು. ಆದರೂ ಹೇಗೆ ಬರಲಿದೆಯೋ ಹಾಗೆ ಸ್ವೀಕರಿಸಿ.ಗೃಹದಲ್ಲಿ ಸಮಾಧಾನವನ್ನು ತಂದುಕೊಳ್ಳುವುದು.
ಕನ್ಯಾ: ದೇಹಾರೋಗ್ಯದಲ್ಲಿ ಬದಲಾವಣೆ ತೋರಿಬಂದು ತಲೆ ಚಿಟ್ಟಿಡಿಸಲಿದೆ. ಹಣಕಾಸಿನಲ್ಲೂ ಬಾಧೆ ಬರಲಿದೆ. ಮನಸ್ಸಿಗೆ ಬಂದ ಕೆಟ್ಟ ಆಲೋಚನೆಗಳನ್ನ ಬಿಟ್ಟುಬಿಡಿ. ಮುಂದಿನ ಭವಿಷ್ಯದ ಆಲೋಚನೆ ಮಾಡಿರಿ.
ತುಲಾ: ಉದ್ಯೋಗ ವ್ಯವಹಾರಗಳಲ್ಲಿ ಒಳ್ಳೆಯ ಅನುಕೂಲ ಒದಗಿ ಬರುವುದು. ಕೌಟುಂಬಿಕ ಸುಖ ಅಭಿವೃದ್ಧಿ ಇರುತ್ತದೆ. ಸೇವಾ ಕಾರ್ಯಗಳಿಗೆ ಇತರರಿಂದ ಪ್ರಶಂಸೆ ಹಾಗೂ ನಿಮ್ಮ ಬಗ್ಗೆ ಅಭಿಮಾನ ಗಳಿಸುವಿರಿ.
ವೃಶ್ಚಿಕ: ಜೀವನದಲ್ಲಿ ಶಿಸ್ತು ಕ್ರಮವಿಟ್ಟುಕೊಂಡಲ್ಲಿ ಮುನ್ನಡೆ ಇರುತ್ತದೆ. ಪರಸ್ಥಳ ಸಂಚಾರವೆಲ್ಲಾ ಕಡಿತಗೊಂಡು ಪರಿಸ್ಥಿತಿ ಡೋಲಾಯಮಾನವಾಗಲಿದೆ. ಆದರೆ ಸಮಾಧಾನ ಚಿತ್ತದಿಂದಿರಿ.
ಧನು: ಅವಿವಾಹಿತರಿಗೆ ವಿವಾಹ ಯೋಗವಿದ್ದು ಪ್ರಯತ್ನ ಸ್ವಲ್ಪ ಸಾಕಾದಿತು. ನಿರುದ್ಯೋಗಿಗಳಿಗೆ ಅವಕಾಶ ಒದಗಿ ಬರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಚೇತರಿಕೆಯು ತೋರಿಬರುವುದು.
ಮಕರ: ನಿಮ್ಮ ಪ್ರಯತ್ನಕ್ಕೆ ನಿರೀಕ್ಷಿತ ರೀತಿಯಲ್ಲಿ ಫಲವಿರದು. ಆಗಾಗ ಧನಾಗಮನದಿಂದ ಕೊಂಚ ಸಮಾಧಾನವಿರುವುದು. ಕಾರ್ಯಕ್ಷೇತ್ರದಲ್ಲಿ ಗಂಭೀರ ಸ್ವಭಾವದವರಾದ ನಿಮಗೆ ಅರ್ಥೈಸಿಕೊಳ್ಳುವವರು ಅಲ್ಪ.
ಕುಂಭ: ಆರ್ಥಿಕವಾಗಿ ಋಣ ಭಾರದ ಚಿಂತೆ ಪರಿಹಾರವಾಗಲಿದೆ. ಶ್ರೀದೇವರ ಅನುಗ್ರಹಕ್ಕಾಗಿ ದೇವತಾ ಕಾರ್ಯಗಳು ಮನೆಯಲ್ಲಿ ನಡೆದಾವು. ಅವಿರತ ಕಾರ್ಯದೊತ್ತಡ ಆಗಾಗ ದೇಹದ ಮೇಲೆ ಪರಿಣಾಮ ಬೀರಲಿದೆ.
ಮೀನ: ಸಾರ್ವಜನಿಕ ರಂಗದಲ್ಲಿ ನಿಮ್ಮ ಸೇವೆಯು ಗುರುತಿಸಲ್ಪಡುವುದು. ಮಿಶ್ರಫಲವು ನಿಮಗೆ ಸಿಗಲಿದೆ. ದೈವಬಲ ಕ್ಷಿಣಿಸಿ ಶರೀರದಲ್ಲಿ ಆಲಸ್ಯ, ಕಷ್ಟಗಳಿಂದ ಹಲವು ನಷ್ಟಗಳುಂಟಾದೀತು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.




