ನಟ ರಾಕ್ಷಸ ಡಾಲಿ ಧನಂಜಯ್ ತಮ್ಮ ನೆಚ್ಚಿನ ಫ್ಯಾನ್ಸ್ಗೆ ಬ್ಯಾಡ್ ನ್ಯೂಸ್ ನೀಡಿದ್ದಾರೆ. ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದಂದು ಅಭಿಮಾನಿಗಳೊಟ್ಟಿಗೆ ಆಚರಿಸಿಕೊಳ್ಳುತ್ತಿದ್ದರು. ಆದ್ರೆ ಈ ಬಾರಿ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ದಾರೆ.
ಈ ವರ್ಷ ಹುಟ್ಟುಹಬ್ಬದ ಸೆಲೆಬ್ರೇಷನ್ಗೆ ಡಾಲಿ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳಲ್ಲಿ ಮಾಹಿತಿ ನೀಡಿದ್ದಾರೆ. ‘ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ಆಗಸ್ಟ್ 23, ಪ್ರತಿ ವರ್ಷದಂತೆ ನಿಮ್ಮೊಡನೆ ಹುಟ್ಟು ಹಬ್ಬವನ್ನ ಸಂಭ್ರಮಿಸುವ ಉತ್ಸಾಹವಿದ್ದರು, ಕಾರಣಾಂತರಗಳಿಂದ ಆಚರಿಸಲಾಗುತ್ತಿಲ್ಲ. ಕ್ಷಮೆಯಿರಲಿ. ಎಲ್ಲಿರುತ್ತೀರೋ ಅಲ್ಲಿಂದಲೆ ಹರಸಿ. ಹಾರೈಸಿ. ಆದಷ್ಟು ಬೇಗ ಸಿಗೋಣ, ಸಾಕಷ್ಟು ಒಳ್ಳೆ ವಿಷಯಗಳೊಂದಿಗೆ, ಸಂಭ್ರಮಗಳೊಂದಿಗೆ. ಪ್ರೀತಿಯಿರಲಿ’ ನಿಮ್ಮ ಪ್ರೀತಿಯ ಡಾಲಿ ಧನಂಜಯ ಅವರು ಪೋಸ್ಟ್ ಮಾಡಿದ್ದಾರೆ.
ಇನ್ನು ನಟ ಧನಂಜಯ್ ಕೋಟಿ ಸಿನಿಮಾದ ಬಳಿಕ ಶಿವಣ್ಣ ಅವರೊಂದಿಗೆ ಉತ್ತರಾಕಾಂಡ, ನಾಡಪ್ರಭು ಕೆಂಪೇಗೌಡ, ಜೊತೆಗೆ ಬಡವ ರಾಸ್ಕಲ್ ನಿರ್ದೇಶಕ ಗುರು ಅವರ ಜೊತೆಗೆ ಹೊಸ ಚಿತ್ರವನ್ನ ಒಪ್ಪಿಕೊಂಡಿದ್ದಾರೆ. ಸ್ಯಾಂಡಲ್ವುಡ್ ಅಷ್ಟೇ ಅಲ್ಲದೆ ಬೇರೆ ಭಾಷೆಯ ಸಿನಿಮಾಗಳು ಕೂಡ ಇವರ ಕೈಯಲ್ಲಿವೆ, ಅದರಲ್ಲಿ ಪುಷ್ಪ 2 ಸಿನಿಮಾ ಕೂಡ ಒಂದು.
-ಸ್ವಾತಿ.ಎಸ್.