ಮೇಷ : ಅಧಿಕಾರದಲ್ಲಿ ಬದಲಾವಣೆ ಸಂಭವವಿದೆ. ಕೃಷಿ ಕಾರ್ಯದಲ್ಲಿ ಸಂತಸದ ದಿನಗಳಿವು. ತಾಯಿಗೆ ಸೇವಾ ಶುಶ್ರೂಷೆ. ಮಗನ ವಿದ್ಯಾಲಾಸ್ಯದಿಂದ ಅವಮಾನ ಪ್ರಸಂಗವಿದೆ. ಸಂಚಾರದಲ್ಲಿ ಜಾಗೃತೆ ಇರಲಿ.

ವೃಷಭ : ಕೆಲವೊಂದು ವಿಷಯಗಳಲ್ಲಿ ನಿಮ್ಮ ನಿರ್ಧಾರವನ್ನ ಹೇಳುವ ಮುನ್ನ, ಯೋಚಿಸಿ, ಚಿಂತಿಸಿ, ಮುನ್ನಡೆಯಬೇಕಿದೆ. ಏಕಾಂತದಲ್ಲಿ ಕಾಲ ಕಳೆಯುವುದರಿಂದ ಸಿಗುವ ಸುಖ ನಿಮಗರಿವಾಗಲಿದೆ.
ಮಿಥುನ : ಅವಿವಾಹಿತರು ತಮ್ಮ ಸಂಗಾತಿಯಿಂದ ಮಿಶ್ರ ಪ್ರತಿಕ್ರಿಯೆಯನ್ನು ಸ್ವೀಕರಿಸಬೇಕಾಗುತ್ತದೆ. ಒಂಟಿಯಾಗಿರುವರಿಗೆ ಜಂಟಿಯಾಗುವ ಆಸೆ ಇರುತ್ತದೆ. ವಧು ಭೇಟಿಯಲ್ಲಿರುವವರಿಗೆ ಯಶಸ್ಸು.
ಕರ್ಕ : ನೀವು ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಈಗಲೂ ಪಶ್ಚಾತಾಪ ಪಡಲಿದ್ದೀರಿ. ಬಂದ ಅವಕಾಶಗಳು ಕೈ ತಪ್ಪಿ ಹೋಗದಂತೆ ಜಾಗೃತೆ ವಹಿಸಿರಿ. ಮುಖ್ಯವಾಗಿ ಘನತೆಯನ್ನ ಕಾಪಾಡಿಕೊಳ್ಳಿ.
ಸಿಂಹ : ವಿಘ್ನ ಬಾಧೆಯಿಂದ ಆದಾಯದಲ್ಲಿ ಆಗಾಗ ವಿಳಂಬವಾದೀತು. ಯಂತ್ರೋಪಜೀವಿಗಳಿಗೆ ಮುಂಭಡ್ತಿ ಸಂಭವ. ಪ್ರಯಾದಿಗಳಲ್ಲಿ ಸಮಸ್ಯೆ ತೋರಿಬಂದಾವು. ಆರೋಗ್ಯದಲ್ಲಿ ಜಾಗೃತೆ.
ಕನ್ಯಾ : ಮಂಗಳ ಕಾರ್ಯಗಳು ವಿಘ್ನವಿಲ್ಲದೇ ನೆರವೇರಲಿದೆ. ವ್ಯಾಪಾರ ವ್ಯವಹಾರಗಳು ಚೆನ್ನಾಗಿದ್ದರೂ ವ್ಯಾಪಾರಿಗಳಿಗೆ ಸಾಲಬಾಧೆ. ಮನೆಯವರ ಮಾತಿಗೆ ಕಿವಿಗೊಡಿರಿ, ಕಾರ್ಯಸಾಧನೆ ಅನುಕೂಲ.
ತುಲಾ : ಆರೋಗ್ಯದಲ್ಲಿ ಪಿತ್ತಪ್ರಕೋಪ ಸಮಸ್ಯೆ ತಂದೀತು. ಹಿರಿಯರ ಮಾರ್ಗದರ್ಶನದಿಂದ ಸ್ಥಾನ ಲಾಭವಿದೆ. ರಾಜಕೀಯದಲ್ಲಿ ಗೊಂದಲದ ಪರಿಸ್ಥಿತಿ ಇದೆ. ಪಾಲು ಬಂಡವಾಳದಲ್ಲಿ ಸಮಸ್ಯೆಗಳು ಎದುರಾಗಲಿದೆ.
ವೃಶ್ಚಿಕ : ಹೊಟೇಲ್ ಉದ್ಯಮದವರಿಗೆ ಉತ್ತಮ ಆದಾಯವಿದೆ. ಬಂಧುವರ್ಗದಲ್ಲಿ ಆಪ್ತರ ವಿರಹ ದುಃಖ ತಂದೀತು. ಉದ್ಯೋಗಿಗಳಿಗೆ ಮುನ್ನಡೆ ಸಂತಸ ತರಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗೃತೆ ವಹಿಸಿರಿ.
ಧನು : ಕಲಾಜಗತ್ತಿಗೆ ಅಲ್ಪ ಆದಾಯವಿದ್ದು, ಹೊಸ ಪ್ರಕ್ರಿಯೆಗೆ ವಿಳಂಬಿಸುವುದು ಉತ್ತಮ. ಹಳೆಯ ಶತ್ರುವೊಬ್ಬ ಕಾಲ್ಕೆರೆದು ಕಲಹಕ್ಕೆ ಕಾರಣನಾದಾನು. ನ್ಯಾಯಾಲಯದ ಕೆಲಸಗಳು ಮಧ್ಯಸ್ತಿಕೆಯಿಂದ ಮುಕ್ತವಾದಾವು.
ಮಕರ : ಹಿರಿಯರಿಗೆ ಆರೋಗ್ಯದ ಬಗ್ಗೆ ಖರ್ಚು ವೆಚ್ಚಗಳು ಅಧಿಕವಾದಾವು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಹೊಟೇಲ್ ವ್ಯವಹಾರಗಳಲ್ಲಿ ಲಾಭವಿರದು, ಯೋಚಿಸಿ ಮುನ್ನಡೆಯಿರಿ.
ಕುಂಭ : ಮಿತ್ರರು ಬಂಧುಗಳು ನಿಮ್ಮ ಪಾಲಿಗೆ ಹಿತವೆನ್ನಿಸಿದರೂ ಜಾಗೃತೆ ವಹಿಸಿರಿ. ಕೋರ್ಟು ಕಚೇರಿಗಳ ಕೆಲಸ, ದಾವೆ, ಪುರಾವೆ , ತೀರ್ಮಾನಕ್ಕೆ ಅನುಕೂಲವಾಗಲಿದೆ. ತೈಲ ಪದಾರ್ಥಗಳಿಂದ ಉತ್ತಮಗಳಿದೆ.
ಮೀನ: ಆಕಸ್ಮಿಕ ಆದಾಯವಿದೆ ಮಕ್ಕಳೊಂದಿಗೆ ಜಗಳ ಕಿರಿ ಕಿರಿ ತಂದೀತು. ಬಂಧುಗಳ ಸಹಕಾರದಿಂದ ಋಣಬಾಧೆ ಮುಕ್ತವಾದೀತು. ಹೊಸ ವಾಹನ ಖರೀದಿಯ ಸಾಧ್ಯತೆ ಇದೆ. ಆರೋಗ್ಯದಲ್ಲಿ ಜಾಗೃತೆ ಮಾಡಿರಿ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.




