ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಬಹುತೇಕ ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಅಲ್ಲದೇ ಇನ್ನೆರಡು ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ಈ ಹಿನ್ನೆಲೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಜಾರಿಗೊಳಿಸಿದೆ.

ಆಂಧ್ರಪ್ರದೇಶದ ಪ್ರಕಾಶಂ ಎಂಬ ಜಿಲ್ಲೆಯಲ್ಲಿ 235 ಜನ ಮದ್ಯ ಸಿಗಲಿಲ್ಲವೆಂಬ ಕಾರಣಕ್ಕೆ ಒಂದು ತಿಂಗಳಿಂದ ಸ್ಯಾನಿಟೈಸರ್ಗೆ ಅಡಿಕ್ಟ್ ಆಗಿದ್ದಾರೆನ್ನಲಾಗಿದೆ. ಈಗಾಗಲೇ ಕುರುಚೇಡು ಜಿಲ್ಲೆಯ 16 ಮಂದಿ ಈ ರೀತಿ ಸ್ಯಾನಿಟೈಸರ್ ಕುಡಿದು ಸಾವನ್ನಪ್ಪಿದ್ದಾರೆ. ಇನ್ನು ಸ್ಯಾನಿಟೈಸರ್ಗೆ ಅಡಿಕ್ಟ್ ಆಗಿರುವ 235 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹರಿಯಾಣಾದ ಜಿಂದ್ ಜಿಲ್ಲೆಯ ಶಾದಿಪುರ ಎಂಬ ಹಳ್ಳಿಯಲ್ಲಿ ಓರ್ವನಿಂದ 24 ಮಂದಿಗೆ ಕೊರೊನಾ ಹರಿಡಿದೆ. ಗುರುಗ್ರಾಮದಿಂದ ಶಾದಿಪುರಕ್ಕೆ ಬಂದಿದ್ದ ಓರ್ವ ಯುವಕ 23 ಜನರ ಜೊತೆಗೂಡಿಸಿಕೊಂಡು ಹುಕ್ಕಾ ಸೇದಿದ್ದ. ಇದರಿಂದ ಅಲ್ಲಿರುವವರಿಗೆಲ್ಲ ಸೋಂಕು ಹರಡಿದೆ ಎನ್ನಲಾಗಿದೆ. ಈ ಕಾರಣಕ್ಕೆ ಆ ಊರಿನಲ್ಲಿ ಹುಕ್ಕಾ ಬ್ಯಾನ್ ಮಾಡಲಾಗಿದೆ.
ಆಗಸ್ಟ್ 5ಕ್ಕೆ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯಲಿದ್ದು, ಅಯೋಧ್ಯಾ ನಗರಿ ಮಧುಮಗಳಂತೆ ಸಿಂಗಾರಗೊಂಡಿದೆ. ಇಡೀ ಅಯೋಧ್ಯೆ ಕೇಸರಿಮಯವಾಗಿದೆ. ಈ ತಯಾರಿ ಕಂಡರೆ ರಾಮನ ಪಟ್ಟಾಭೀಶೇಕದ ದಿನ ಹೀಗೆ ಇತ್ತೇನೋ ಅನ್ನುವಷ್ಟು ನಗರವನ್ನ ಚಂದವಾಗಿ ಶೃಂಗರಿಸಲಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




