State News : ಉಚಿತ ವಿದ್ಯುತ್ ಸೇರಿದಂತೆ 5 ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲಿರುವ ಕರ್ನಾಟಕದ ಜನರಿಗೆ ಈ ತಿಂಗಳಿಂದ ಬೇರೆ ಬೆಲೆ ಏರಿಕೆಗಳ ಬಿಸಿ ತಾಕಲಿದೆ ಎಂಬುದು ಸ್ಪಷ್ಟವಾಗಿದೆ. ಆಗಸ್ಟ್ 1ರಿಂದ ಹಾಲು, ತರಕಾರಿ ಇತ್ಯಾದಿ ವಸ್ತುಗಳು ದುಬಾರಿಯಾಗಲಿವೆ.
ತರಕಾರಿ ಬೆಲೆ ಏರಿಕೆ: ಟೊಮೆಟೋ ದರ ಏರಿಕೆ ಬೆನ್ನಲ್ಲೇ ಹಸಿರು ಮೆಣಸಿನಕಾಯಿ, ಶುಂಠಿ, ಕ್ಯಾರಟ್, ಬೀನ್ಸ್, ಬಟಾಣಿ ಇತ್ಯಾದಿ ತರಕಾರಿಗಳ ಬೆಲೆಗಳೂ ಕೂಡ ಎರಡು ಪಟ್ಟು ಹೆಚ್ಚಾಗಿವೆ ಎನ್ನಲಾಗಿದೆ.
ದುಬಾರಿಯಾಗಲಿದೆ ಮದ್ಯ: ಮದ್ಯದ ಮೇಲೆ ಕರ್ನಾಟಕ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಭಾರತದಲ್ಲಿ ನಿರ್ಮಿಸಲಾದ ವಿದೇಶೀ ಮದ್ಯದ ಮೇಲೆ ಶೇ. 20ರಷ್ಟು ಸುಂಕ ಹೆಚ್ಚಿಸಲಾಗಿದೆ. ಬಿಯರ್ ಮೇಲಿನ ಅಬಕಾರಿ ಸುಂಕ ಶೇ. 175ರಿಂದ ಶೇ. 185ಕ್ಕೆ ಹೆಚ್ಚಲ ವಾಗುತ್ತಿದೆ. ಆಗಸ್ಟ್ 1ರಿಂದ ಬಿಯರ್ ಸೇರಿ ವಿವಿಧ ಮದ್ಯ ಪೇಯಗಳ ಬೆಲೆ ಹೆಚ್ಚಾಗಲಿದೆ.
ಕೆಎಂಎಫ್ ಹಾಲು ಲೀಟರ್ಗೆ 3 ರೂಪಾಯಿ ಹೆಚ್ಚಳ: ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ನ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಲು ನಿರ್ಧಾರ ಮಾಡಿದೆ. ಆಗಸ್ಟ್ 1ರಿಂದ ನಂದಿನಿ ಹಾಲು ಲೀಟರ್ಗೆ 3 ರೂನಷ್ಟು ದುಬಾರಿ ಆಗಲಿದೆ.
ದುಬಾರಿ ಹೋಟೆಲ್ ಊಟ: ಅಗತ್ಯ ವಸ್ತುಗಳ ಬೆಲೆ ಏರಿರುವ ಹಿನ್ನೆಲೆ ಹೋಟೆಲ್ ಊಟವೂ ದುಬಾರಿಯಾಗಲಿವೆ. ಬೆಂಗಳೂರಿನ ಹೋಟೆಲ್ಗಳು ಊಟದ ಬೆಲೆಯನ್ನು ಶೇ. 10ರಷ್ಟು ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಸ್ಥರಾಸ್ತಿಯ ಮಾರ್ಗಸೂಚಿ ದರ ಏರಿಕೆ : ಬಜೆಟ್ನಲ್ಲಿ ಸರ್ಕಾರ ಸ್ಥಿರಾಸ್ತಿಗಳಿಗೆ ಮಾರ್ಗಸೂಚಿ ದರವನ್ನು ಶೇ. 14ರವರೆಗೆ ಏರಿಸುವುದಾಗಿ ಹೇಳಿತ್ತು. ಆಗಸ್ಟ್ 1ರಿಂದ ಇದು ಚಾಲನೆಗೆ ಬರಲಿದೆ.
ಕೆಎಸ್ಆರ್ ಟಿಸಿ ಗುತ್ತಿಗೆ ದರವೂ ಹೆಚ್ಚಳ : ಖಾಸಗಿ ಕಂಪನಿಗಳಿಗೆ ಬಸ್ಸುಗಳ ಎರವಲು ಸೇವೆ ಕೊಡುವ ಕೆಎಸ್ಆರ್ಟಿಸಿ, ಈಗ ಅದರ ದರ ಹೆಚ್ಚಿಸಿದೆ. ಈ ಕಾಂಟ್ರಾಕ್ಟ್ ಬಸ್ಸುಗಳಲ್ಲಿ ಒಂದು ಕಿಮೀಗೆ 2ರಿಂದ 5 ರೂವರೆಗೂ ದರ ಹೆಚ್ಚಿಸಲಾಗಿದೆ. ಆಗಸ್ಟ್ 1ರಿಂದ ಇದು ಜಾರಿಗೆ ಬರಲಿದೆ.
ಹೀಗೆ ಇದಷ್ಟೇ ಅಲ್ಲದೆ ಗಣಿಗಾರಿಕೆಯಲ್ಲಿ ರಾಜಧನ ಹೆಚ್ಚಳವಾಗುತ್ತಿದೆ. ಇದರಿಂದ ಮರಳು ಇತ್ಯಾದಿ ಕಟ್ಟಡ ನಿರ್ಮಾಣ ವಸ್ತುಗಳು ದುಬಾರಿ ಆಗಲಿವೆ. ಶಾಲಾ ವಾಹನ, ಕ್ಯಾಬ್ ಟ್ರಕ್ಗಳ ಮೇಲೆ ಮೋಟಾರು ವಾಹನ ತೆರಿಗೆ ಹೆಚ್ಚಲ. ಇದರಿಂದ ಸರಕು ಸಾಗಣಿ, ಪ್ರಯಾಣ ದರಗಳು ಹೆಚ್ಚುವ ನಿರೀಕ್ಷೆ ಮೂಡಿದೆ.
Surendran : ಕೇರಳ ಸ್ಟೇಟ್ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಷನ್ ಮಂಜೇಶ್ವರ ಮೇಘಲ ಸಮಿತಿಯ ಕುಟುಂಬ ಸಂಗಮ