ಚೀನಾ: 2010 ಅಲ್ಲಿನ ಮಿಲಿಯೇನರ್ ಗಳಿಗಾಗಿ ಚೀನಾ ಅಲ್ಲಿನ ಈಶಾನ್ಯ ಪ್ರ್ಯಾಂತ್ಯದ ಲಿಯಾನಿಂಗ್ ನಲ್ಲಿ ಗ್ರೀನ್ ಲ್ಯಾಂಡ್ ಕಂಪನಿ ಮಲ್ಟಿ ಮಿಲಿಯೇನರ್ ಯೋಜನೆಯನ್ನು ಆರಂಭಿಸಿತ್ತು. ಆದರೆ ಎರಡು ವರ್ಷಗಳ ನಂತರ ಈ ಯೋಜನೆಯನ್ನು ನಿಲ್ಲಿಸಲಾಯಿತು.
260 ವಿಲ್ಲಾ ಯೋಜನೆಗಳನ್ನು ಪ್ರಾರಂಭಿಸಿದ ಗ್ರೀನ್ ಲ್ಯಾಂಡ್ ಕಂಪನಿ ಯುರೋಪ್ ದೇಶದ ಮಾದರಿಯಲ್ಲಿ ಲಿಯಾನಿಂಗ್ ನಲ್ಲಿ ಕೋಟ್ಯಾದಿಪತಿಗಳಿಗಾಗಿ ವಿಲ್ಲಾಗಳನ್ನು ನಿರ್ಮಿಸಿತ್ತು ಆದರೆ ಕಾರಣಂತರಗಳಿಂದ ಈ ಯೋಜನೆಯನ್ನು ನಿಲ್ಲಿಸಲಾಯಿತು. ಆದರೆ ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಬಹುಶಃ ಗ್ರಾಹಕರು ಈ ವಿಲ್ಲಾಗಳನ್ನು ಕೊಂಡುಕೊಳ್ಳಲು ಆಸಕ್ತಿ ತೋರದಿರಬಹುದು ಅಥವಾ ಹಣಕಾಸಿನ ತೊಂದರೆಯಿಂದಿರಬಹುದು.
ಆದರೆ ಈಗ ಆ ಜಾಗದ ಸ್ಥಿತಿ ಸ್ಮಶಾನದಂತೆ ಭಾಸವಾಗುತ್ತಿದೆ. ಈ ಜಾಗಕ್ಕೆ ಹೋಗಲು ಜನರು ಹೆದರುತ್ತಿದ್ದಾರೆ. ಆದರೆ ಈಗ ಕಟ್ಟಡದ ಮುಂಬಾಗದ ಜಾಗವನ್ನು ಅಲ್ಲಿನ ರೈತರು ಜಾನುವಾರುಗಳನ್ನುಕಟ್ಟಿ ಹಾಕಲು ಬಳೆಸುತ್ತಿದ್ದಾರೆ. ಹಾಗೂ ವಿಲ್ಲಾಗಳು ಖಾಲಿ ಜಾಗವನ್ನು ರೈತರು ಜಮೀನಾಗಿ ಪರಿವರ್ತಿಸಿ ಬೇಸಾಯವನ್ನು ಮಾಡುತ್ತಿದ್ದಾರೆ.
Surendran : ಕೇರಳ ಸ್ಟೇಟ್ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಷನ್ ಮಂಜೇಶ್ವರ ಮೇಘಲ ಸಮಿತಿಯ ಕುಟುಂಬ ಸಂಗಮ
DK Shivakumar : ಡಿಸಿಎಂ ಡಿಕೆಶಿಗೆ ಬಿಗ್ ರಿಲೀಫ್ : ಸಿಬಿಐ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್




