ಕೃಷ್ಣರಾಜ ನಗರ : ಶಕ್ತಿಯೋಜನೆ ಜಾರಿಯಾದಾಗಿನಿಂದ ಅಂಗವಿಕಲ ಆಟೋ ಚಾಲಕರ ಬದುಕಿಗೆ ಕಲ್ಲು ಹಾಕಿದ ಕಾಂಗ್ರೆಸ್ ಸರ್ಕಾರ ! ಎಂದು ಆಟೋ ಚಾಲಕರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ, ಅನ್ನ ಭಾಗ್ಯ ಯೋಜನೆ ಎಂದು ಘೋಷಣೆ ಮಾಡಿದ ಕಾಂಗ್ರೇಸ್ ಸರ್ಕಾರ ಹಣದ ಭಾಗ್ಯ ಮಾಡಿದೆ, ನಿಮ್ಮ ದುಡ್ಡು ಯಾರಿಗೆ ಬೇಕು ಸ್ವಾಮಿ? ಮಹಿಳೆಯರು ಮಾತ್ರಾನ ಈ ವೋಟ್ ಹಾಕಿರೋದು ಪುರುಷರು ಯಾರು ವೋಟ್ ಹಾಕಿಲ್ವಾ ಎಂಬುವುದಾಗಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಶಕ್ತಿಯೋಜನೆ ಮಾಡಿರುವುದು ಸರಿಯಲ್ಲ. ವಯಸ್ಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪ್ರಯಾಣ ಕೊಟ್ಟಿದ್ರೆ ತುಂಬಾ ಚೆನ್ನಾಗಿರ್ತಿತ್ತು. ಫ್ರೀ ಬಸ್ ಪ್ರಯಾಣ ಕೊಟ್ಟಿರುವುದರಿಂದ ನಮ್ಮ ಆಟೋರಿಕ್ಷಾಗಳಲ್ಲಿ ಮಹಿಳೆಯರು ಕೂಡ ಪ್ರಯಾಣ ಮಾಡುತ್ತಿಲ್ಲ. ಶಕ್ತಿ ಯೋಜನೆ ನಮ್ಮ ದುಡಿಮೆಗೆ ಕಲ್ಲು ಹಾಕಿರುವಂತಿದೆ.
ಶಕ್ತಿ ಯೋಜನೆ ವಾಪಸ್ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ವಯಸ್ಕರಿಗೆ ಕೊಟ್ಟರೆ ಸಾಕು, ಶಕ್ತಿ ಯೋಜನೆ ಬಂದಮೇಲಿಂದ ನಮಗೆ ಸರಿಯಾದ ಸಮಯಕ್ಕೆ ಸಾಲಗಳನ್ನು ಕಟ್ಟುವುದಕ್ಕಾಗುತ್ತಿಲ್ಲ ಮನೆ ನೆಡೆಸಲು ಬಹಳ ಕಷ್ಟವಾಗ್ತಿದೆ. ಮಹಿಳೆಯರೇ ಮಾತ್ರ ವೋಟ್ ಹಾಕಿದ್ದಾರಾ ಪುರುಷರು ಯಾರು ಕೂಡ ವೋಟ್ ಹಾಕಿಲ್ವಾ ಎನ್ನುವುದೇ ನಮ್ಮ ಪ್ರಶ್ನೆ ಎಂಬುವುದಾಗಿ ಬಹುವಾಗಿ ಆಟೋ ಚಾಲಕರು ಕರ್ನಾಟಕ ಟಿವಿ ಜೊತೆ ಅಳಲನ್ನು ತೋಡಿಕೊಂಡಿದ್ದಾರೆ.
Shivaraj Kumar-ಚಿತ್ರರಂಗದ ,ರಾಜಕೀಯ ಗಣ್ಯರಿಂದ ಶಿವಣ್ಣಗೆ ಹುಟ್ಟುಹಬ್ಬದ ಶುಭಾಶಯಗಳು