Friday, July 4, 2025

Latest Posts

ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಆಭರಣಗಳನ್ನು ಹಿಂದಿರುಗಿಸಿದ ಆಟೋ ಚಾಲಕ

- Advertisement -

ಮೈಸೂರು: ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಒಡವೆಗಳನ್ನು ಆಟೋ ಚಾಲಕ ಮಾಲೀಕರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ. ಆಟೋ ಚಾಲಕ ಸ್ವಾಮಿ ಎಂಬುವರು ಒಡವೆಗಳನ್ನು ಹಿಂದಿರುಗಿಸಿದ್ದಾರೆ. ಈ ಪ್ರಾಮಣಿಕ ಕೆಲಸವನ್ನು ಮೆಚ್ಚಿಕೊಂಡು ಪೊಲೀಸರು ಆಟೋ ಚಾಲಕ ಸ್ವಾಮಿಯವರನ್ನು ಸನ್ಮಾನ ಮಾಡಿ ಗೌರವಿಸಿದ್ದಾರೆ. ತಮಿಳುನಾಡು ಮೂಲದ ಚೇತನ ಎಂಬುವವರು ತಿರುಚಿಯಿಂದ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ಸ್ವಾಮಿ ಎಂಬುವರ ಆಟೋದಲ್ಲಿ ಮನೆಗೆ ಹೋಗಿದ್ದಾರೆ.

ಹಲವು ದಿನಗಳಿಂದ ದನಕರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಸೆರೆ

ಚೇತನ್ ಎಂಬುವರು ಮರೆತು ಒಡವೆಗಳನ್ನು ಆಟೋದಲ್ಲಿ ಬಿಟ್ಟುಹೋಗಿದ್ದಾರೆ. ಸುಮಾರು 1.5 ಲಕ್ಷ ಮೌಲ್ಯದ 24 ಗ್ರಾಮಿನ ಮಾಂಗಲ್ಯ ಸರ, 10 ಗ್ರಾಂ ಸರ , 2 ಗ್ರಾಂ ಉಂಗುರವನ್ನು ಚೇತನ ಅವರು ಆಟೋಪದಲ್ಲಿ ಬಿಟ್ಟು ಹೋಗಿದ್ದರು. ನಂತರ ಆಟೋ ಚಾಲಕ ಹಿಂದುರುಗಿ ನೋಡಿದಾಗ ಆಭರಣ ಕಂಡಿದ್ದು, ತಕ್ಷಣ ಸ್ವಾಮಿಯವರು ದೇವರಾಜ ಸಂಚಾರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಮಾಂಡೌಸ್ ಚಂಡಮಾರುತದಿಂದ ರಾಜ್ಯದ ಹಲವೆಡೆ ಮಳೆಯಾವಗುವ ಸಾಧ್ಯತೆ

ರೆಬಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ

- Advertisement -

Latest Posts

Don't Miss