- Advertisement -
ಹುಬ್ಬಳ್ಳಿ: ಆಟೋ ರಿಕ್ಷಾಗಳನ್ನು ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧನ ಮಾಡುವಲ್ಲಿ ಕಸಬಾ ಪೇಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಬಂಕಾಪೂರ ಚೌಕ್ ಬಳಿ ಆಸೀಫ್ ಹಾಗೂ ದೊಡ್ಡಪ್ಪ ದೊಡ್ಡಮನಿ ಎಂಬುವವರು ಆಟೋ ರಿಕ್ಷಾಗಳನ್ನು ಕಳ್ಳತನ ಮಾಡಿ ಮತ್ತೊಬ್ಬರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಕಸಬಾಪೇಟೆ ಠಾಣೆಯ ಪಿ.ಐ ರಾಘವೇಂದ್ರ ಹಳ್ಳೂರ ಹಾಗೂ ಪಿಎಸ್ಐ ವಿಶ್ವನಾಥ ಆಲಮಟ್ಟಿ ಅವರ ನೇತೃತ್ವದ ಪೊಲೀಸರ ತಂಡ ಚಾಲಾಕಿ ಕಳ್ಳರನ್ನು 24 ಗಂಟೆಗಳಲ್ಲಿ ಸೆರೆ ಹಿಡಿದಿದ್ದಾರೆ. ಇನ್ನೂ ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಪಿಹೆಚ್ ಡಿ ಮಾಡಿ ಸನಾತನ ಧರ್ಮ ಇಲ್ಲಾ ಅಂತಾ ಪ್ರೂ ಮಾಡ್ಲಿ’- ಟೆಂಗಿನಕಾಯಿ
‘ಸನಾತನವನ್ನು ಕೊರೋನ ಎನ್ನುವವರು ಸನಾತನ ಎಷ್ಟು ಪುರಾತನ ಎನ್ನುವುದು ತಿಳಿದುಕೊಳ್ಳಲಿ’
- Advertisement -