ಜಿಎಸ್ ಟಿಯಿಂದಾಗಿ ದೇಶದಲ್ಲಿ ಕೈಗಾರಿಕಾ ಕ್ಷೇತ್ರ ಹಳ್ಳ ಹಿಡಿತಿದೆ ಎಂಬ ಆರೋಪ ಬಲವಾಗಿತ್ತು. ನಮ್ಮ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಸಾವಿರು ಉದ್ಯೋಗಿಗಳು ನಿರುದ್ಯೋಗಿಯಾಗಿದ್ರು. ದೇಶಾದ್ಯಂತ ಆಟೋಮೊಬೈಲ್ ಕ್ಷೇತ್ರದಲ್ಲಿ ಲಕ್ಷಾಂತರ ಜನ ಕಲಸ ಕಳೆದುಕೊಂಡಿದ್ರು. ಆದ್ರೆ ಕಳೆದೊಂದು ತಿಂಗಳಿನಿಂದ ಮತ್ತೆ ಕಾರುಗಳ ಮಾರಾಟ ಹೆಚ್ಚಳವಾಗಿದೆಯಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಹೀಗೆ.
ಚಕ್ರವರ್ತಿ ಸೂಲಿಬೆಲೆ ಫೇಸ್ ಬುಕ್ ನಲ್ಲಿ ಬರೆದಿದ್ದು ಹೀಗೆ
ಮಾರುತಿ ಸುಜುಕಿಯ ಹೊಸ ಗಾಡಿ S-Presso ಹೆಬ್ಬಾಳದ ವರುಣ್ ಮೋಟಾರ್ಸ್‌ನಲ್ಲಿ ಅನಾವರಣಗೊಳಿಸಿದೆ. Mini SUV ಎಂದು ಕರೆಯಲ್ಪಡುವ ಈ ಗಾಡಿ ಮನಮುಟ್ಟುವಂತಿರುವುದು ನಿಜ. ಆದರೆ ನನಗೆ ಬಹಳ ಖುಷಿ ಕೊಟ್ಟ ಸಂಗತಿ ಎಂದರೆ ವರುಣ್ ಮೋಟಾರ್ಸ್‌ನ ಜನರಲ್ ಮ್ಯಾನೇಜರ್ ಕಲೀಮ್‌ರೊಂದಿಗಿನ ಎಂಟ್ಹತ್ತು ನಿಮಿಷದ ಮಾತುಕತೆ. ಅವರ ಪ್ರಕಾರ ಕಳೆದ ತಿಂಗಳಿನಿಂದ ಕಾರುಗಳ ಮಾರಾಟ ಹೆಚ್ಚಲಾರಂಭಿಸಿದೆ. ಈ ಹಿಂದೆ ಮೂರ್ನಾಲ್ಕು ತಿಂಗಳು ಆದ ಕೊರತೆ ಎಲ್ಲವೂ ಈಗ ಸರಿದೂಗಲಾರಂಭಿಸಿದೆ. ಜನ ಜಿಎಸ್‌ಟಿಯಲ್ಲಿ ಕಾರುಗಳ ಮೇಲಿನ ಸುಂಕ ಕಡಿಮೆಯಾಗಬಹುದೆಂದು ಕಾದಿದ್ದೇ ಇದಕ್ಕೆಲ್ಲವೂ ಮೂಲ ಕಾರಣ ಎಂದು ಅವರು ಹೇಳುವಾಗ ಮನಸ್ಸಿಗೆ ಸಮಾಧಾನವಾಗಿದ್ದಂತೂ ನಿಜ. ಭಾರತದ ಆರ್ಥಿಕತೆ ಮತ್ತೆ ಹಳಿಗೆ ಬರುವ ಲಕ್ಷಣ ತೋರಲಾರಂಭಿಸಿದೆ. ಹಾಗಂತ ಇದು ಕಾರು ಉತ್ಪಾದಕರಿಗೆ ಗೊತ್ತಿರಲಿಲ್ಲವೆಂದೇನಲ್ಲ. ಆಂಧ್ರ ಮೂಲದ ವರುಣ್ ಮೋಟಾರ್ಸ್‌ನ ಮಾಲೀಕರು ಮಾರಾಟ ಕಡಿಮೆಯಾದಾಗಲೇ ಹೆಚ್ಚು ಹೆಚ್ಚು ಶೋರೂಮ್‌ಗಳನ್ನು ತೆರೆದದ್ದಂತೆ. ಏಕೆಂದು ಕೇಳಿದ್ದಕ್ಕೆ ಕಲೀಮ್ ನಗುತ್ತಾ ಉತ್ತರಿಸಿದರು, ‘ಈ ಪರಿಯ ಮಾರಾಟದ ಹಿನ್ನಡೆ ತಾತ್ಕಾಲಿಕವೆಂಬುದು ಉದ್ದಿಮೆದಾರರಿಗೆ ಖಂಡಿತ ಗೊತ್ತಿರುತ್ತದೆ’.
ಅಂದರೆ ಆರ್ಥಿಕತೆ ಹಳಿಗೆ ಮರಳುತ್ತಿದೆ. – ಚಕ್ರವರ್ತಿ ಸೂಲಿಬೆಲೆ ಫೇಸ್ ಬುಕ್ ಬರಹ