ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಈಗ ಚುನಾವಣೆಯದ್ದೇ ಮಾತು. ಅವರು ಗೆಲ್ತಾರಾ… ಇಲ್ಲಾ ಇವರು ಗೆಲ್ತಾರಾ ಅನ್ನೋ ಚರ್ಚೆ ದೊಡ್ಡದಾಗಿ ಬಿಟ್ಟಿದೆ. ನ್ಯಾಯಮೂರ್ತಿ ಆರ್.ಎಂ. ಲೋಧಾ ಶಿಫಾರಸಿನ ನಂತರ, ಬದಲಾದ ನಿಯಮಗಳಂತೆ ಈ ಬಾರಿ ಕೆಎಸ್ಸಿಎ ಚುನಾವಣೆ ನಡೆಯುತ್ತಿದೆ. ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ ಇಲ್ಲಿತನಕ ದರ್ಬಾರ್ ಮಾಡಿದ್ದ ಬ್ರಿಜೇಶ್ ಪಟೇಲ್ ಈ ಬಾರಿ ಕಾನೂನಿನಂತೆ ಚುನಾವಣೆಗೆ ಸ್ಪರ್ಧೆ ಮಾಡ್ತಿಲ್ಲ. ಆದ್ರೆ ಪಟೇಲ ಗಿರಿ ಬಿಟ್ಟುಕೊಡಲು ಮನಸ್ಸು ಮಾಡ್ತಿಲ್ಲ. ಹೀಗಾಗಿ ತನ್ನ ಹಿಡಿತದಲ್ಲಿರುವ ಕಲಿಗಳನ್ನು ಚುನಾವಣಾ ಕದನಕ್ಕೆ ಇಳಿಸಿದ್ದಾರೆ. Officially ಅಧಿಕಾರದಲ್ಲಿ ಇರದೇ ಇದ್ರೂ, Unofficially, KSCAಗೆ ತಾನೇ ಬಾಸ್ ಆಗ್ಬೇಕು ಅನ್ನೋದು ಮಾಜಿ ಕಾರ್ಯದರ್ಶಿಗಳ ಗೇಮ್ ಪ್ಲಾನ್. ಮತ್ತೊಂದು ಕಡೆ ಕ್ಲೀನ್ ಕ್ರಿಕೆಟ್ ಹೆಸರಿನಲ್ಲಿ KSCA ಗದ್ದುಗೆ ಏರಲು ಕ್ಯಾಪ್ಟನ್ ಹರೀಶ್ ನೇತೃತ್ವದ ತಂಡ ಅಖಾಡಕ್ಕೆ ಧಮುಕಿದೆ. ಅದೇನೇ ಆದ್ರೂ ಪಟೇಲಗಿರಿಗೆ ಮುಕ್ತಿ ಹಾಡ್ಬೇಕು ಅನ್ನೋ ತೀರ್ಮಾನಕ್ಕೆ ಈ ತಂಡ ಬಂದಿದೆ.
ಈ ಬಾರಿಯ ಕೆಎಸ್ಸಿಎ ಚುನಾವಣೆ ಅಕ್ಟೋಬರ್ 3ಕ್ಕೆ ಫಿಕ್ಸ್ ಆಗಿದೆ. ಅಕ್ಟೋಬರ್ 4ರ ಒಳಗೆ ಚುನಾವಣಾ ರಿಸಲ್ಟ್ ಅನ್ನು ಬಿಸಿಸಿಐಗೆ ಕಳುಹಿಸಬೇಕಿದೆ. ಒಟ್ಟು 17 ಆಫೀಸ್ ಬೇರರ್ಸ್ ಹುದ್ದೆಗಳಿಗೆ ಚುನಾವಣೆ ನಡೆಲಿದೆ. ನಿಯಯದಂತೆ ಪ್ರತೀ 3 ವರ್ಷಕ್ಕೊಮ್ಮೆ ಬಿಸಿಸಿಐನ ಅಧೀನ ಸಂಸ್ಥೆಗಳಲ್ಲಿ ಚುನಾವಣೆ ನಡೆಯಬೇಕು. ಆದ್ರೆ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ನಂತರ ನಡೆದ ಬೆಳವಣಿಗೆಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಚುನಾವಣೆಗೆ ಹಲವು ಮಾನದಂಡಗಳನ್ನು ಫಿಕ್ಸ್ ಮಾಡಲಾಗಿತ್ತು. ನ್ಯಾಯಮೂರ್ತಿ ಲೋಧ ಸುಪ್ರೀಂ ಕೋರ್ಟ್ ಗೆ ನೀಡಿದ ಶಿಫಾರಸ್ಸಿನಂತೆ ಚುನಾವಣೆ ನಡೆಯಬೇಕಿತ್ತು. ಆದ್ರೆ ಬಿಸಿಸಿಐ ಮತ್ತು ಇತರೆ ಸಂಸ್ಥೆಗಳು ಹೊಸ ನಿಯಮಕ್ಕೆ ಬದಲಾವಣೆ ತರಬೇಕೆಂದು ಹೋರಾಡಿದ್ದವು. ಈಗ ಹೊಸ ನಿಯಮದಂತೆ ಚುನಾವಣೆ ನಡೆಯುತ್ತಿದೆ. ಕೆಎಸ್ಸಿಎನಲ್ಲಿ ಈ ಬಾರಿ ಬದಲಾವಣೆ ತರಲೇಬೇಕು ಎಂದು ಹೋರಾಟ ಕೂಡ ನಡೆಯುತ್ತಿದೆ.
ಬ್ರಿಜೇಶ್ ಬೆಂಬಲಿತ ಅಭ್ಯರ್ಥಿಗಳ ವಿರುದ್ದ ತಂಡ ಕಟ್ಟಿ ಅಖಾಡಕ್ಕೆ ಇಳಿಯುತ್ತಿರುವುದು ಕ್ಯಾಪ್ಟನ್ ಹರೀಶ್ ನೇತೃತ್ವದ ಟೀಮ್. ಕ್ರೀಡಾ ವಿಶ್ಲೇಷಕ ಜೋಸೆಫ್ ಹೂವರ್ ಕೂಡ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸ್ತಿದ್ದಾರೆ. ಕ್ಲೀನ್ ಕ್ರಿಕೆಟ್ ತಂಡಕ್ಕೆ ಇತ್ತೀಚೆಗೆ ಮುಗಿದ ಕೆಪಿಎಲ್ನಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಟಾಪಿಕ್ ಪ್ರಮುಖ ಅಸ್ತ್ರ. ಅಷ್ಟೇ ಅಲ್ಲ ಕರ್ನಾಟಕ ಕ್ರಿಕೆಟ್ ನಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಕೂಡ ಬೆಳಕು ಚೆಲ್ಲುವ ಪ್ರಯತ್ನ ಮಾಡ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ KSCAನಲ್ಲಿ ಅಧಿಪತ್ಯ ಸ್ಥಾಪಿಸಿರುವ ಬ್ರಿಜೇಶ್ ಪಟೇಲ್ ಅಂಡ್ ಟೀಮ್ ಅನ್ನು ಹೊರಗಟ್ಟುವ ಉದ್ದೇಶವನ್ನು ಕೂಡ ಹೊಂದಿದೆ.
ಇನ್ನು ಅಧಿಕಾರ ಉಳಿಸಿಕೊಳ್ಳಲು ಕೂಡ ಹಾಲಿ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಳ್ಳುತ್ತಿದೆ. 1983ರ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯ ರೋಜರ್ ಬಿನ್ನಿಯನ್ನು ಅಧ್ಯಕ್ಷ ಸ್ಥಾನದ ಅಖಾಡಕ್ಕೆ ಇಳಿಸಿದೆ. ಖ್ಯಾತ ಕ್ರಿಕೆಟಿಗರನ್ನು ಅಧಿಕಾರದ ಗದ್ದುಗೆಗೆ ಏರಿಸುವ ಪ್ಲಾನ್ ಕೂಡ ನಡೆಯುತ್ತಿದೆ. ಒಟ್ಟಿನಲ್ಲಿ ಅಕ್ಟೋಬರ್ 3ಕ್ಕೆ ನಡೆಯುವ ಕೆಎಸ್ಸಿಎ ಚುನಾವಣೆ ಈಗ ಹಾಟ್ ಟಾಪಿಕ್ ಆಗಿರೋದಂತೂ ಸತ್ಯ.