Health Tips: ದೇಹದಲ್ಲಿ ಬ್ಯಾಕ್ಟೀರಿಯಾ ಹೋದಾಗ ನಮ್ಮ ಆರೋಗ್ಯ ಹಾಳಾಗುತ್ತದೆ. ಅದರಲ್ಲೂ ವೈರಲ್ ಫಿವರ್ ಬರೋದು ಹೆಚ್ಚು. ಬೇರೆ ಬೇರೆ ದೇಹಗಳಿಂದ ಹರಡುವ ಕ್ರಿಮಿಗಳು ಈ ರೀತಿಯ ಅನಾರೋಗ್ಯ ಸಮಸ್ಯೆ ತರುತ್ತದೆ. ಹಾಗಾಗಿಯೇ ಶಾಲೆಗೆ ಹೋಗುವ ಮಕ್ಕಳಿಗೆ ಹೆಚ್ಚು ವೈರಲ್ ಫಿವರ್ ಆಗೋದು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ಕೋವಿಡ್ ಬಂದಾಗ ನಾವು ಅದ್ಯಾವ ರೀತಿ ಸಮಸ್ಯೆ ಎದುರಿಸಿದ್ದೇವು ಅಂತಾ ನಿಮಗೆಲ್ಲರಿಗೂ ತಿಳಿದೇ ಇದೆ. ಅದು ಕೂಡ ಹರಡುವ ಖಾಯಿಲೆಯಾಗಿದ್ದು, ನಾವೆಲ್ಲರೂ ಅದರಿಂದ ಬಚಾವಾಗಬೇಕೆಂದು, ಮಾಸ್ಕ್ ಧರಿಸಿ, ಓಡಾಡುತ್ತಿದ್ದೆವು. ಹಲವು ತಿಂಗಳು ಲಾಕ್ಡೌನ್ನಲ್ಲೂ ಇದ್ದೆವು.
ಅದೇ ರೀತಿ ಇತ್ತೀಚಿನ ಜ್ವರಗಳು ಕೂಡ ಮಕ್ಕಳ ಜೀವ ಹಿಂಡುತ್ತಿದೆ. ವೈರಲ್ ಇನ್ಫೆಕ್ಷನ್ ಆದ ಬಳಿಕ ಮಕ್ಕಳಲ್ಲಿ ವಾಂತಿ, ಬೇಧಿ, ಜ್ವರ, ನೆಗಡಿ, ಕೆಮ್ಮು, ತಲೆನೋವು, ಕಿವಿ ನೋವು, ಹೀಗೆ ಹಲವು ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




