Wednesday, November 26, 2025

Latest Posts

Bagalakote: ಭಾರತದಲ್ಲಿಂದು ಹೆಣ್ಣು ಮಕ್ಕಳು ಸ್ವತಂತ್ರವಾಗಿ ಬದುಕಲು ಕಾರಣ ಬಾಬಾ ಸಾಹೇಬ್: ಸಚಿವ ಲಾಡ್

- Advertisement -

Bagalakote: ಬಾಗಲಕೋಟೆಯಲ್ಲಿಂದು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಸಚಿವ ಸಂತೋಷ್ ಲಾಡ್ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ಜಾರಿಗೆ ತಂದ ಬಗ್ಗೆ ಮಾತನಾಡಿದ್ದಾರೆ.

ಬಾಬಾ ಸಾಹೇಬ್ ಅವರು ಬರೀ ದಲಿತರ ಪರ ಹೋರಾಡಿದ್ದು ಮಾತ್ರವಲ್ಲದೇ, ಅವರು ಭಾರತಕ್ಕೆ ಹಿಂದೂ ಕೋಡ್‌ ಬಿಲ್ ತಂದರು. ಯಾಕೆ ತಂದರೆಂದರೆ, ಈ ದೇಶದಲ್ಲಿ ಮುಂಚೆ ಹೆಣ್ಣು ಮಕ್ಕಳಿಗೆ ಪಾತ್ರಾರ್ಜಿತ ಆಸ್ತಿಯಲ್ಲಿ, ಗಂಡನ ಆಸ್ತಿಯಲ್ಲಿ ಹಕ್ಕಿರಲಿಲ್ಲ. ಕಿರುಕುಳ ಇದ್ದರೆ ಡಿವೋರ್ಸ್‌ಗೆ ಅವಕಾಶವಿರಲಿಲ್ಲ. ವಿಧವೆಯಾದರೆ ಮರುಮದುವೆಗೆ ಅವಕಾಶವಿರಲಿಲ್ಲ.

ಅಲ್ಲದೇ ವಿಧವೆಯಾದ ಬಳಿಕ ಆಕೆ 1 ಮೂಲೆಗೆ ಸೀಮಿತವಾಗಿದ್ದಳು. ಆದರೆ ಬಾಬಾ ಸಾಹೇಬ್ ಅವರು, ಹಿಂದೂ ಕೋಡ್ ಬಿಲ್ ತಂದು ಇದಕ್ಕೆಲ್ಲ ಅಂತ್ಯ ಹಾಡಿದರು. ವಿಧವೆಯರು ಮರು ಮದುವೆಯಾಗುವ ಅವಕಾಶ ಸಿಕ್ಕಿತು. ಕಿರುಕುಳ ಇದ್ದರೆ ಡಿವೋರ್ಸ್ ಪಡೆಯುವ ಅವಕಾಶ ಸಿಕ್ಕಿತು. ಹೆಣ್ಣು ಮಕ್ಕಳು ಭಾರತದಲ್ಲಿ ಸ್ವಾತಂತ್ರ್ಯವಾಗಿ ಓಡಾಡುತ್ತಿದ್ದಾರೆಂದರೆ, ಅದಕ್ಕೆ ಬಾಬಾ ಸಾಹೇಬ್ ಅವರೇ ಕಾರಣ ಅಂತಾ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

- Advertisement -

Latest Posts

Don't Miss