Bagalakote News: ಬಾಗಲಕೋಟೆ: ಬಾಗಲಕೋಟೆ ಉಪಚುನಾವನೆ ವೇಳೆ ಕಾಂಗ್ರೆಸ್ ಗೆ ಸಂಕಷ್ಟ ಎದುರಾಗಿ ನಿಂತಿದೆ. ಕಾಂಗ್ರೆಸ್ ನ ಲೋಕಲ್ ಕಾರ್ಯಕರ್ತ ಜಾಫರ್ ಬೇಪಾರಿ ಮತದಾರರಿಗೆ ಹಣದ ಆಮಿಷ ಒಡ್ಡಿ ಹಣ ಹಂಚಿಕೆ ಮಾಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಫ್. ಐ. ಆರ್. ದಾಖಲಾಗಿದೆ.
ರಾಜ್ಯ ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗ“ಂಡಿದ್ದು, ನಿನ್ನೆ ನಡೆದ ಬಾಗಲಕೋಟೆ ಉಪಚುನಾವಣೆ ಮತದಾನದ ಹಿನ್ನಲೆ ವಾOಬೆ ಕಾಲೋನಿಯಲ್ಲಿ ಮತದಾರರಿಗೆ ಹಣದ ಆಮಿಷ ಒಡ್ಡಿ ಹಣ ಹಂಚಿಕೆ ಮಾಡಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜಾಫರ್ ಬೇಪಾರಿ ವಿರುದ್ಧ ಎಫ್. ಐ ಆರ್. ದಾಖಲಾಗಿದೆ. ಈ ಮೂಲಕ ಸ್ವತಃ ಕಾರ್ಯಕರ್ತನೇ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ತಂದ“ಡ್ಡಿದ್ದಾನೆ.
ಮತದಾನದ ದಿನವೇ ಬಾಗಲಕೋಟೆಯ ವಾoಬೆ ಕಾಲೋನಿಯಲ್ಲಿ ಮತದಾರರಿಗೆ ಹಣ ಹಂಚಿದ ಕಾಂಗ್ರೆಸ್ ಕಾರ್ಯಕರ್ತ ಜಾಫರ್ ಬೇಪಾರಿ ಎಂದು ಗುರುತಿಸಲಾಗಿದ್ದು, ಹಣ ಹಂಚಿದ ಕಾಂಗ್ರೆಸ್ ಕಾರ್ಯ ಕರ್ತನನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಒಟ್ಟಾರೆಯಾಗಿ ಜಿದ್ದಾಜಿದ್ದಿ ಕಾಣವಾಗಿದ್ದ ಬಾಗಲಕೋಟೆಯಲ್ಲಿ ಚುನಾವಣಾ ಸಮಯದಲ್ಲೇ ಕಾಂಗ್ರೆಸ್ ಗೆ ಸಂಕಷ್ಟ ಎದುರಾಗಿದ್ದು ವಿಪರ್ಯಾಸದ ಸಂಗತಿ ಅಂತಾನೆ ಹೇಳಬಹುದು.




