- Advertisement -
Bagalakote: ಬಾಗಲಕೋಟೆ: ಜಮಖಂಡಿ ಸುತ್ತಮುತ್ತ ನಡೆದಿದ್ದ ಬೈಕ್ ಕೇಸ್ ಬೇಧಿಸಿರುವ ಜಮಖಂಡಿ ಶಹರ ಪೋಲೀಸರು, ಕಳ್ಳರನ್ನು ಬಂಧಿಸಿದ್ದಾರೆ. ಅಲ್ಲದೇ, ಬೈಕ್‌ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.
ಇನಾಂ ಹಂಚಿನಾಳ ಗ್ರಾಮದ ಬೈಕ್ ಕಳ್ಳ ಸಿದ್ದಪ್ಪ ಉಪ್ಪಲದಿನ್ನಿ ಬಂಧಿತ ಆರೋಪಿಯಾಗಿದ್ದು, ಇವನಿಂದ 10 ಲಕ್ಷ ಬೆಲೆ ಬಾಳುವ 22 ಬೈಕ್ ಜಪ್ತಿ ಮಾಡಲಾಗಿದೆ. ಈತ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ.
ಬೈಕ್ ಕಳೆದುಕೊಂಡ ಅಪ್ಪಾಸಾಬ್ ಜಮಖಂಡಿ ಪೊಲೀಸರಿಗೆ ನೀಡಿದ ದೂರಿನನ್ವಯ, ಪೋಲೀಸರು ಕೇಸ್ ದಾಖಲಿಸಿ, ತನಿಖೆ ನಡೆಸಿದ್ದಾರೆ. ಕಳೆದ ನಾಲ್ಕೈದು ತಿಂಗಳಿಂದ ಬೈಕ್ ಕಳ್ಳತನ ನಡೆಯುತ್ತಿದ್ದು, ಪೋಲೀಸರು ಕೂಡ ಜಾಣನಡೆ ತೋರಿ, ಸ್ಕೇಚ್ ಹಾಕಿದ್ದಾರೆ. ಬಳಿಕ ಬೈಕ್ ಕಳ್ಳರನ್ನು ಪೋಲೀಸರು ಬಂಧಿಸಿ, ಬೈಕ್ ಜಪ್ತಿ ಮಾಡಿದ್ದಾರೆ.
- Advertisement -