Bagalakote News: ಬಾಗಲಕೋಟೆ: ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂದು ಹಲವು ಪ್ರಯತ್ನ ಪಡುತ್ತಿದ್ದಾರೆ. ಆದರೆ ಅದನ್ನು ಎಲ್ಲಿಯೂ ಹೇಳುತ್ತಿಲ್ಲ. ಇತ್ತ ಡಿಕೆಶಿ ಫ್ಯಾನ್ಸ್ ಕೂಡ ನಮ್ಮ ಬಾಸ್ ಸಿಎಂ ಆಗಲಿ ಅಂತಾ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ.
ಹಲವು ಕಡೆ ದೇವರಿಗೆ ಹರಕೆ ಹೇಳಿ, ಪೂಜೆ ಮಾಡಿರುವ ಡಿಕೆಶಿ ಫ್ಯಾನ್ಸ್, ಡಿಕೆಶಿನೇ ಮುಂದಿನ ಸಿಎಂ ಆಗಬೇಕು ಎಂದು ಬೇಡಿದ್ದಾರೆ. ಅದೇ ರೀತಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಕಾಂಗ್ರೆಸ್ ಯುವ ಘಟಕದಿಂದ ಪೂಜೆ ನಡೆದಿದ್ದು, ಡಿಸಿಎಂ ಬೇಗ ಸಿಎಂ ಆಗಲಿ ಅಂತಾ ಪ್ರಾರ್ಥಿಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕುಮಾರ್ ದಾನಕ್ಕನವರ್ ನೇತೃತ್ವದಲ್ಲಿ, ಕಲ್ಲೋಳ್ಳಿ ಗ್ರಾಮದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ನಡೆದಿದೆ. ದೇವರ ಮುಂದೆ ಡಿಕೆಶಿ ಫೋಟೋ ಇಟ್ಟು ವಿಶೇಷ ಪೂಜೆ ಮಾಡಿಸಿದ್ದಲ್ಲದೇ, ಅಭಿಷೇಕ ಕೂಡ ಮಾಡಿಸಿದ್ದಾರೆ. ಅಲ್ಲದೇ ದೇವಸ್ಥಾನದ ಮುಂಭಾಗದಲ್ಲಿ 1001 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾರೆ.




