National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ. ಇದು ಎಲ್ಲರಿಗೂ ಆಶ್ಚರ್ಯವಾಗಿಸುವಂಥದ್ದು. ಇದಕ್ಕೆ ಕಾರಣ ಕರ್ಣಪಿಶಾಚಿನಿಯನ್ನು ಬಾಬಾ ಒಲಿಸಿಕ“ಂಡಿದ್ದಾರೆ. ಇದರಿಂದಲೇ ಪ್ರಪಂಂಚದಾದ್ಯಂತ ಅವರಿಗೆ ಭಕ್ತರೂ ಇದ್ದಾರೆ.
ಲೋಕದ ಮೋಹ ಮಾಯೆಗಳನ್ನು ತೊರೆದು, ಸನ್ಯಾಸಿಯ ರೀತಿ ಇರುವ ಬಾಬಾ ಸ್ವಲ್ಪ ಮಾಡರ್ನ್ ಆಗಿಯೂ ಇದ್ದಾರೆ. ಅವರು ಸದ್ಯ ಫಿಜಿ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ವೇಳೆ ಅವರು, ಕ್ರೂಸ್ನಲ್ಲಿ ಕುಳಿತು 60 ಸಾವಿರ ಬೆಲೆ ಬಾಳುವ ಗುಚಿ ಗೂಗಲ್ಸ್, ಮತ್ತು ಎಕ್ಸ್ಪೆನ್ಸಿವ್ ಜಾಕೇಟ್ ಧರಿಸಿದ್ದಾರೆ.
ಈ ಫೋಟೋವನ್ನು ಅವರ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು, ಫಿಜಿ ಪ್ರವಾಾಸದ ಬಗ್ಗೆ ವಿವರಿಸಲಾಗಿದೆ. ಆದರೆ ಇದನ್ನು ನೋಡಿರುವ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ, ಬಾಬಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಗಳನ್ನು ಯಾವ ರೀತಿ ಮಂಗ ಮಾಡಬೇಕು ಎಂದು ತಿಳಿಯಿರಿ. ಸನ್ಯಾಸತ್ವ ಸ್ವೀಕರಿಸಿರುವ ನಿಮಗೆ ಇದೆಲ್ಲ ಬೇಕಾ..? ಈ ರೀತಿಯ ಕಾಮೆಂಟ್ಗಳು ಬರುತ್ತಿದೆ.
ಇನ್ನು ಈ ಕಾಮೆಂಟ್ಗಳನ್ನು ನೋಡಿರುವ ಬಾಬಾ, ತಿರುಗೇಟು ನೀಡಿದ್ದು, ನಾನು ಇದನ್ನೆಲ್ಲ ಖರೀದಿ ಮಾಡಲಿಲ್ಲ. ಬದಲಾಗಿ ನನ್ನ ಭಕ್ತರು ಇದನ್ನು ಪ್ರೀತಿಯಿಂದ ನೀಡಿದ್ದಾರೆ. ಹಾಗಾಗಿ ನಾನು ಇದನ್ನು ಧರಿಸಿದ್ದೇನೆ. ನಿಮಗೆ ಇದರಿಂದ ಬೇಸರವಾಗಿದ್ದರೆ, ನಾನು ಲಕ್ಷದ ಜಾಕೇಟ್ನ್ನೇ ಧರಿಸುತ್ತೇನೆ ಎಂದು ಟಾಂಗ್ ನೀಡಿದ್ದಾರೆ.