devotional story:
ಬಾಳೆ ಎಲೆ ಊಟ ಎಂದರೆ ಎಲ್ಲರಿಗು ಬಲು ಪ್ರಿಯ ಬಾಳೆ ಎಲೆಗೆ ತನ್ನದ್ದೇ ಆದ ಮಹತ್ವವಿದೆ ಸಾಮಾನ್ಯವಾಗಿ ಮದುವೆಗಳಲ್ಲಿ, ಹಬ್ಬಗಳಲ್ಲಿ ಹಾಗು ಯಾವುದೇ ಸಮಾರಂಭದಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವ ಸಂಪ್ರದಾಯವಿದೆ ಇದರಿಂದ ಊಟದ ರುಚಿಯು ಹೆಚ್ಚಾಗುತ್ತದೆ . ಊಟಮಾಡುವಾಗ ಬಾಳೆ ಎಲೆ ಇರಲೇಬೇಕು ಎಂದು ಕೆಲವರಂತೂ ಕಡ್ಡಾಯವಾಗಿ ಕೇಳುತ್ತಾರೆ, ಆದರೆ ಏಲಕ್ಕಿ ಬಾಳೆ ಗಿಡದ ಎಲೆ ಮಾತ್ರ ಊಟಮಾಡಲು ಉಪಯೋಗವಾಗುತ್ತದೆ, ಪಚ್ಚಬಾಳೆ ಗಿಡದ ಎಲೆಗಳು ತೋಟದಲ್ಲಿ ಗಾಳಿಗೆ ಸೀಳಿ ಹೋಗುತ್ತದೆ ಆದಕಾರಣ ಈ ಎಲೆಗಳನ್ನು ಊಟದಲ್ಲಿ ಬಳಸಲಾಗುವುದಿಲ್ಲ, ಹೀಗಾಗಿ ಏಲಕ್ಕಿ ಬಾಳೆ ಗಿಡ ಮಾತ್ರ ಊಟದಲ್ಲಿ ಬಳಸಲಾಗುತ್ತದೆ. ಈ ಗಿಡದ ಎಲೆಗಳು ಆಕರ್ಷಕ ಬಣ್ಣವನ್ನು ಹೊಂದಿರುತ್ತವೆ.
ಹಾಗಾದ್ರೆ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆಗುವ ಉಪಯೋಗವೇನು ..?
ಬಾಳೆ ಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ ಬಿಸಿ ಆಹಾರ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ ಇದರಿಂದ ಜೀರ್ಣಕ್ರಿಯೆ ಸುಗಮವಾಗಿರುತ್ತದೆ . ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ, ಅದು ಸಂಪ್ರದಾಯ ಸಹ ಹೌದು ಹಾಗಾಗಿಯೇ ಮದುವೆ, ದೇವಾಲಯಗಳ ಪ್ರಸಾದ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯಲ್ಲಿ ಊಟ ಬಡಿಸಲಾಗುತ್ತದೆ . ಬಾಳೆಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬದುಕುವುದಿಲ್ಲ ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ . ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪ್ರೀ ರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ ,ಬಾಳೆಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ, ಭವಿಷ್ಯದಲ್ಲಿ ಚರ್ಮರೋಗಗಳು ಬಾರದಂತೆ ತಡೆಯುತ್ತದೆ . ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುತ್ತದೆ .
ದೇಹದ ಮೇಲೆ ಕಂಡು ಬರುವ ಯಾವುದಾದರು ಸುಟ್ಟ ಗಾಯಗಳಿಗೆ ಶುಂಠಿ ಎಣ್ಣೆಯಲ್ಲಿ ಅದ್ದಿದ ಬಾಳೆ ಎಲೆಯನ್ನು ಹಾಕಿ ಕಟ್ಟಿದರೆ ಸುಟ್ಟ ಗಾಯವನ್ನು ಸಹ ಶಮನಗೊಳಿಸುತ್ತದೆ.
ಬೆಂಗಳೂರು:ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಚಂದ್ರಶೇಖರ್ ದಿಡೀರ್ ಭೇಟಿ..!
“ರಾಜ್ಯದಲ್ಲಿ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ” : ಕಟೀಲ್