ಬಾಳೆಹೊನ್ನೂರು : ಆಸ್ಪತ್ರೆಯಲ್ಲಿ ಗುತ್ತಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆಸ್ಪತ್ರೆ ವೈದ್ಯನನ್ನು ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆಯ ಸಂಬಂದಿಗಳು ಧರ್ಮದೇಟು ಕೊಟ್ಟು ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಎಲ್ಡೋಸ್ ಟಿ ವರ್ಗಿಸ್ ಎನ್ನುವ ವೈದ್ಯರು ಗುತ್ತಿಗೆ ಸಿಬ್ಬಂದಿಗೆ ಆಕೆಯ ಡೆಪ್ಯುಟೇಶನ್ ರದ್ದುಗೊಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದು, ಈ ಹಿಂದೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ತನ್ನೊಂದಿಗೆ ಬರಲು ಡೆಪ್ಯುಟೇಶನ್ ಆದೇಶ ನೀಡುವಂತೆ ತಿಳಿಸಿದ್ದಾರೆ. ಆ ಬಳಿಕವಷ್ಟೇ ನರಸಿಂಹರಾಜಪುರದಲ್ಲಿ ಕೆಲಸ ಮುಮದುವರಿಸಬಹುದು ಎಂದು ಸಲಹೆ ನೀಡಿದ್ದಾರೆ.
ನಂತರ ವೈದ್ಯರ ಸಲಹೆ ಅವನ ಜೊತೆ ಬರಲು ಒಪ್ಪಿಕೊಂಡಿದ್ದಾಳೆ. ವೈದ್ಯರು ಆಕೆಯನ್ನು ತನ್ನ ಕಾರಿನಲ್ಲಿ ಕಳಸ ಕಡೆಗೆ ಕರೆದುಕೊಂಡು ಹೋಗಿ ದಾರಿ ಮಧ್ಯೆ ಬಾಳೆಹೊನ್ನೂರು ಬಳಿಯ ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇಬ್ಬರೂ ಲಾಡ್ಜ್‌ನಲ್ಲಿದ್ದಾಗ ಅವರನ್ನು ಹಿಂಬಾಲಿಸಿದ ಸಂತ್ರಸ್ತೆಯ ಸಂಬಂಧಿಕರು ವೈದ್ಯಾಧಿಕಾರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವೈದ್ಯರ ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.ಮಹಿಳೆಯ ಸಂಬಂಧಿಕರು ವೈದ್ಯರಿಗೆ ಥಳಿಸಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
BanneruGatta; ಚಿರತೆಗಳ ಸರಣಿ ಸಾವು ತಪ್ಪಿಸಲು ಹೈ ಅಲರ್ಟ್ ಘೋಷಿಸಿದ ಸಚಿವರು..!
Chandrayana Ganesh; ಮದಿಹಾಳದಲ್ಲಿ ಪ್ರತಿಷ್ಠಾಪನೆಗೊಂಡಿದೆ ಚಂದ್ರಯಾನ-3 ಗಣಪತಿ