ಪಾಕಿಸ್ತಾನದದ ಬಲುಚಿಸ್ತಾನದ ಪ್ರಾಂತ್ಯದಲ್ಲಿ ಮಾರ್ಕೆಟ್ ಒಂದರಲ್ಲಿ ಸಂಬವಿಸಿದೆ ಅಗ್ನಿ ದುರಂತದಲ್ಲಿ ನಾಲ್ಕು ಜನ ಸಾವಿಗೀಡಾಗಿದ್ದಾರೆ. ಹತ್ತು ಮಂದಿ ಗಾಯಗೊಂಡಿದ್ದಾರೆ. ಇನ್ನ ಈ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದ್ದು ಬಾರಿ ಪ್ರಮಾಣದ ಆಸ್ತಿ ಪಾಸ್ತಿ ನಾಶವಾಗಿದೆ.
ಬರ್ಖಾನ್ ಡೆಪ್ಯುಟಿ ಕಮಿಷನರ್ ಅಬ್ದುಲ್ಲಾ ಖೋಸೊ ಡಾನ್ ಪತ್ರಿಕೆಗೆ, ರಖ್ನಿ ಮಾರುಕಟ್ಟೆ ಪ್ರದೇಶದಲ್ಲಿ ಮೋಟಾರ್ ಸೈಕಲ್‌ನಲ್ಲಿ ಅಳವಡಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಾಗ ಸ್ಫೋಟ ಸಂಭವಿಸಿದೆ ಎಂದು ಹೇಳಿದರು.ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ತಂಡವು ಭೇಟಿ ನೀಡಿದ್ದು,ಹೆಚ್ಚಿನ ತನಿಖೆಗಾಗಿ ಪ್ರದೇಶವನ್ನು ಸುತ್ತುವರಿದಿದೆ ಎಂದು ಬರ್ಖಾನ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸಜ್ಜದ್ ಅಫ್ಜಲ್ ತಿಳಿಸಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿನ , ಪೊಲೀಸರಿಂದ ಪರಿಶೀಲನೆ, ರಕ್ಷಣಾ ತಂಡ ರಕ್ತಸಿಕ್ತ ಸಂತ್ರಸ್ತರನ್ನು ಒಯ್ಯುತ್ತಿರುವುದನ್ನು ಕಾಣಬಹುದು. ಚೆಲ್ಲಾಪಿಲ್ಲಿಯಾಗಿರುವ ದ್ವಿಚಕ್ರವಾಹನಗಳು ಮತ್ತು ಸುಟ್ಟ ತರಕಾರಿಗಳು ರಸ್ತೆಯ ಮೇಲೆ ಹರಡಿಕೊಂಡಿರುವುದನ್ನು ಕಾಣಬಹುದು.
ರಶ್ಮಿಕಾ ಮಂದಣ್ಣ ತುಂಡುಡುಗೆ ನೋಡಿ ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ ನೆಟ್ಟಿಗರು…!