State News:
Ballari: Bharath Jodo:ರಾಜ್ಯದಲ್ಲಿ 16ನೇ ದಿನದ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ ಪುನರಾರಂಭವಾಗಿದೆ. ಬಳ್ಳಾರಿ, ಹಲಕುಂದಿ ಮಠದಿಂದ ಪಾದಯಾತ್ರೆ ಆರಂಭವಾಗಿದೆ. ರಾಹುಲ್ ಗಾಂಧಿ ಬಳ್ಳಾರಿ ನಗರಕ್ಕೆ ಆಗಮಿಸುತ್ತಿದ್ದಂತೆ ರಾಹುಲ್ ಬರುವ ರಸ್ತೆಯ ಮೇಲೆ ಬಣ್ಣ ಬಣ್ಣಗಳ ರಂಗೋಲಿಯಿಂದ ಅಲಂಕಾರ ಮಾಡಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲಾಗಿದೆ. ಇಂದು ಬಳ್ಳಾರಿ ತಲುಪುವ ಮೂಲಕ ಯಾತ್ರೆ 1,000 ಕಿ.ಮೀ. ಕ್ರಮಿಸಿದೆ. ಬಳ್ಳಾರಿಯ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಅಚ್ಚೇ ದಿನ್ ಮೋದಿ ಗಿಫ್ಟ್ ಎಂಬ ವ್ಯಂಗ್ಯ ಪ್ರದರ್ಶನ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಯೂತ್ ಕಾಂಗ್ರೆಸ್ ಭಿತ್ತಿಚಿತ್ರ ಪ್ರದರ್ಶನ ಮಾಡಿದೆ. ಇದನ್ನೂ ಓದಿ….“ಸೋನಿಯಾ ಕಾಲು ಹಿಡಿದು ಸಿಎಂ ಆಗಿದ್ದ ಸಿದ್ರಾಮಣ್ಣ”: ನಳಿನ್‍ಕುಮಾರ್ ಕಟೀಲ್
ಪಾದಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ರ‍್ಥಿ ಮಲ್ಲಿಕರ‍್ಜುನ ರ‍್ಗೆ ಅವರು ಭಾಗಿಯಾಗಿದ್ದಾರೆ. ಬಳ್ಳಾರಿ ನಗರದ ಒಳಗೆ ಪಾದಯಾತ್ರೆ ಸಾಗುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಪಾದಯಾತ್ರೆಯಲ್ಲಿ ಸೇರಿಕೊಂಡರು. ಪಾದಯಾತ್ರೆ ನಡುವೆ ಅನ್ನ ರಾಮಯ್ಯ ಕ್ಯಾಂಟಿನ್ನಲ್ಲಿ ಜನರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಸಿದ್ದರಾಮಯ್ಯ ಹೆಸರಿನಲ್ಲಿ ಅಭಿಮಾನಿಗಳು ತೆರೆದ ಕ್ಯಾಂಟಿನ್ ಇದಾಗಿತ್ತು.ಇದನ್ನೂ ಓದಿ….ಪಾರ್ಲಿಮೆಂಟ್ ಬಗ್ಗೆ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ…