Haveri Exclusive News: ರೈತರು ಮತ್ತು ಅರಣ್ಯಾಧಿಕಾರಿಗಳ ನಡುವೆ ಹೊಡೆದಾಟ ನಡೆದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲ್ಲೂಕಿನ ಶಿವಪುರ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದೆ.
ಅರಣ್ಯ ಭೂಮಿಯಲ್ಲಿ ಗಿಡ ಕಡಿಯುತ್ತಿದ್ದಾರೆಂದುದುಂಡಸಿ ವಲಯದ ಅರಣ್ಯ ಸಿಬ್ಬಂದಿ ಜಮೀನಿಗೆ ಬಂದಿದ್ದು, ಅಲ್ಲಿದ್ದ ರೈತರು, ಯಾವ ಗಿಡವನ್ನೂ ಕಡಿದಿಲ್ಲ, ಬೇಲಿ ಹಾಕಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಅಲ್ಲದೇ ಮೀನು ಒತ್ತುವರಿ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ, ತೊಂದರೆ ಕೊಡಬೇಡಿ ಎಂದು ರೈತರು ಮನವಿ ಮಾಡಿದ್ದಾರೆ.
ಈ ವೇಳೆ ಈರಪ್ಪ ಲಮಾಣಿ ಹಾಗೂ ಅರಣ್ಯ ಸಿಬ್ಬಂದಿ ನಡುವೆ ವಾಗ್ವಾದವಾಗಿ, ವಾದ ವಿಕೋಪಕ್ಕೆ ಹೋಗಿ ಅರಣ್ಯ ಸಿಬ್ಬಂದಿಗಳು ರೈತ ಈರಪ್ಪನನ್ನ ಜಮೀನಿನ ಆಚೆಗೆ ಹೊತ್ತೊಯ್ದಿದ್ದಿದ್ದಾರೆ. ಈ ವೇಳೆ ರೈತರ ಹಾಗೂ ಅರಣ್ಯ ಸಿಬ್ಬಂದಿಗಳ ಮದ್ಯೆ ಬಡಿದಾಟ ನಡೆದಿದೆ.
ಬಳಿಕ ಅಧಿಕಾರಿಗಳು ರೈತನನ್ನು ಕರೆದುಕ“ಂಡು ಹೋಗಲು ಪ್ರಯತ್ನಿಸಿದ್ದಾರೆ. ಆಗ ರೈತನ ಪತ್ನಿ ಮತ್ತು ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ತಡೆದಿದ್ದಾರೆ. ಜೀಪಿಗೆ ಅಡ್ಡವಾಗಿ ನಿಂತು ಅದಿಕಾರಿಗಳಿಗೆ ಆವಾಜ್ ಹಾಕಿದ್ದಾರೆ. ಸದ್ಯ ಈ ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿದ್ದು, ಬಂಕಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




