- Advertisement -
Dasara News:
ಹಿಂದೂ ಧರ್ಮದಲ್ಲಿ ಪವಿತ್ರ ಹಬ್ಬಗಳಲ್ಲಿ ಒಂದಾದ ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿ ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ದಿನಾಂಕ 29/09/2022ರಂದು ಗುರುವಾರ ನವರಾತ್ರಿಯ ನಾಲಕ್ಕನೆ ದಿನದ ಸಂದರ್ಭವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ,ಲಲಿತಸಹಸ್ತ್ರ ನಾಮ ಹಾಗು ನವಗ್ರಹ ಹೋಮಗಳನ್ನೂ ಆಯೋಜಿಸಿದ್ದು ನವರಾತ್ರಿಯ ದಿನದ ಸಂದರ್ಭವಾಗಿ ಅಮ್ಮನವರು ಅರಿಶಿಣ ,ಕುಂಕುಮ ನವವರ್ಣ ಅಲಂಕಾರದಲ್ಲಿ ದರ್ಶನ ನೀಡುತ್ತಿದ್ದಾರೆ .ಈ ದಿನ ಅಮ್ಮನವರು ಅರಿಶಿಣ ಕುಂಕುಮ ಮಲ್ಲಿಗೆ ಹೂಮಾಲೆ ಧರಿಸಿ ಶೋಭಿಸುತ್ತಿದ್ದಾರೆ, ಈ ದಿನ ದೇವಿಯನ್ನು ದರ್ಶಿಸಲು ಭಕ್ತ ಸಾಗರವೇ ಹರಿದು ಬರುತ್ತಿದೆ. ಈ ದೃಶ ನೋಡಲು ಎರಡು ಕಣ್ಣಗಳು ಸಾಲದು ಎಂದು ಅಲ್ಲಿನ ಭಕ್ತರಮಾತಾಗಿದೆ .ಹಾಗಾದರೆ ನೀವು ಕೂಡ ನವರಾತ್ರಿಯ ಸಂದರ್ಭವಾಗಿ ಈ ದೇವಾಲಯಕ್ಕೆ ಭೇಟಿನೀಡಿ ದೇವಿಯ ಸುಂದರವಾದ ಮೂರ್ತಿಯನ್ನು ಕಣ್ತುಂಬಿಕೊಂಡು ಬನ್ನಿ .
- Advertisement -