Saturday, July 20, 2024

Latest Posts

ಕೊರೊನಾ ಹಾವಳಿ ಇನ್ಮೇಲೆ ಕಡಿಮೆಯಾಗುತ್ತೆ – ರಾಜಗುರು ಭವಿಷ್ಯ

- Advertisement -

ಬೆಂಗಳೂರು : ಕೊರೊನಾ ಇಡೀ ವಿಶ್ವವನ್ನ ಬಿಟ್ಟು ಬಿಡದಂತೆ ಕಾಡ್ತಿದೆ.. ಚೀನಾ ವನ್ನ ಹೊರತುಪಡಿಸಿದ್ರೆ ಉಳಿದ ಎಲ್ಲಾ ದೇಶಗಳಲ್ಲೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ರಾಜಗುರು ದ್ವಾರಕನಾಥ ಗುರೂಜಿ ಮಾತು ಸ್ವಲ್ಪ ಸಮಾಧಾನ ತರುತ್ತಿದೆ. ಯಾಕಂದ್ರೆ ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡಿದ್ದು ಇದನ್ನ ಮೇಷ ಸಂಕ್ರಮಣ ಎನ್ನಲಾಗುತ್ತೆ. ಇನ್ಮುಂದೆ ಸೂರ್ಯ ಮೇಷ ಸಂಕ್ರಮಣದಲ್ಲಿ ಏರುಮುಖವಾಗಿ ಸಾಗುತ್ತಾನೆ. ಯುದ್ಧಕ್ಕೆ ತೆರಳುವ ಶ್ರೀರಾಮನು ಸೂರ್ಯನನ್ನ ಪೂಜಿಸಿ ಏನು ಮಾಡಬೇಕೆಂದು ಕೇಳುತ್ತಾನೆ. ನೀನು ಯುದ್ಧಾಕಾಂಕ್ಷೆಯಿಂದ ಭೂಮಿಗೆ ಬಂದಿಲ್ಲ. ಆದರೆ ಭೂಮಿಯನ್ನ ನಡೆಯುವ ಅಧರ್ಮವನ್ನ ನಾಶ ಮಾಡಲು ಬಂದಿದ್ದೀಯಾ. ಭೂಮಿಯಲ್ಲಿ ಅಧರ್ಮ ಹೆಚ್ಚಾದಾಗಲೆಲ್ಲಾ ಧರ್ಮವನ್ನ ಕಾಪಾಡು ಅಂತ ಸೂರ್ಯನು ಮಾರ್ಗದರ್ಶನ ಮಾಡುತ್ತಾನೆ.  ಈಗಲೂ ನಾವು ಯುದ್ಧ ಯುದ್ಧಭೂಮಿಯಲ್ಲಿದ್ದೇವೆ.. ಸೂರ್ಯ ಮೇ 15ಕ್ಕೆ ವೃಷಭ ರಾಶಿ ಪ್ರವೇಶ ಮಾಡುವವರೆಗೂ ಸೋಂಕು ಕಡಿಮೆಯಾಗುತ್ತದೆ. ಅಲ್ಲಿಯ ವರೆಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಅನ್ನುವುದರ ಮೇಲೆ ಕೊರೊನಾ ನಿಗ್ರಹಕ್ಕೆ ಬರುತ್ತದೆ. ನಾವೆಲ್ಲಾ ಲಾಕ್ ಡೌನ್ ಪಾಲನೆ ಮಾಡಿದ್ರೆ ಸೋಂಕು ಹರಡುವುದನ್ನ ತಪ್ಪಿಸಬಹುದು ಎಂದು ರಾಜಗುರು ದ್ವಾರಕನಾಥ್ ಗುರೂಜಿ ಹೇಳಿದ್ದಾರೆ..

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ, ಬೆಂಗಳೂರು

- Advertisement -

Latest Posts

Don't Miss