Thursday, December 12, 2024

Latest Posts

1 ಲಕ್ಷ ಕುಟುಂಬಕ್ಕೆ ತಲಾ 25 ಕೆಜಿ ಅಕ್ಕಿ & ದಿನಸಿ ಸಾಮಗ್ರಿ ವಿತರಿಸಿದ ಮುನಿರತ್ನ

- Advertisement -

ಬೆಂಗಳೂರು : ಏಪ್ರಿಲ್ 14ಕ್ಕೆ ಮುಗಿಯಲಿದ್ದ ಲಾಕ್ ಡೌನ್ ಇದೀಗ ಏಪ್ರಿಲ್ 30ರ ವರೆಗೂ ಮುಂದುವರೆದಿದೆ.. ಜನಸಾಮಾನ್ಯರನ್ನ ಆ ದೇವರು ಸಹ ಕಾಪಾಡದಂತಹ ಸನ್ನಿವೇಶ ನಿರ್ಮಾಣವಾಗಿದೆ.. ಕೆಲವೆಡೆ ರಾಜಕಾರಣಿಗಳು ಕೈಲಾದಷ್ಟು ಸಹಾಯ ಮಾಡ್ತಿದ್ದಾರೆ.. ಬೆಂಗಳೂರಿನ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ 6 ಲಕ್ಷ ದಷ್ಟು ಜನಸಂಖ್ಯೆ ಇದೆ.. ನಾಲ್ಕೂವರೆ ಲಕ್ಷ ಮತದಾರರೇ ಇದ್ದಾರೆ.. ಈ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರು, ಮಧ್ಯಮವರ್ಗದ ಜನರೇ ಹೆಚ್ಚು ಈ ಹಿನ್ನೆಲೆ ಮುನಿರತ್ನ ಜನರ ನೆರವಿಗೆ ಧಾವವಿಸಿದ್ದಾರೆ.. ಇಂದು  ಜೆಪಿ ಪಾರ್ಕ್, ಯಶವಂತಪುರ, ಜಾಲಹಳ್ಳಿ ವಾರ್ಡ್ ನ ಜನರಿಗೆ 25 ಕೆ.ಜಿ ಅಕ್ಕಿ, 2 ಕೆಜಿ ತೊಗರಿ ಬೆಳೆ, 2 ಕೆಜಿ ಅಡುಗೆ ಎಣ್ಣೆ, 1 ಕೆಜಿ  ಸಕ್ಕರೆ ಸೇರಿದಂತೆ ದಿನಸಿ ಸಾಮಾಗ್ರಿಗಳು ಹಾಗೂ 3 ಕೆಜಿ ತರಕಾರಿಯನ್ನ ಮುನಿರತ್ನ ವಿತರಿಸಿದ್ರು. ಈ ವೇಳೆ ಬೆಂಗಳೂರಿ ಸೆಂಟ್ರಲ್ ಕ್ಷೇತ್ರದ ಸಂಸದ ಪಿ.ಸಿ ಮೋಹನ್ ಹಾಜರಿದ್ದು ಮುನಿರತ್ನ ಜನಪರ ಕೆಲಸಕ್ಕೆ ಮೆಚ್ಚುಗೆ ಚ್ಯಕ್ತ ಪಡಿಸಿದ್ರು.. ಇದೇ ವೇಳೆ ಮಾತನಾಡಿದ ಮುನಿರತ್ನ ನಾನು ಪ್ರತೀ ವರ್ಷವೂ ಜನರಿಗೆ ಸಹಾಯ ಮಾಡುತ್ತ ಬಂದಿದ್ದೇನೆ.. ಲಾಕ್ ಡೌನ್ ಸಂದರ್ಭದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವುದು ನನ್ನ ಕೆಲಸ.. ಜನರಿಗೆ ತುಂಬಾ ಕಷ್ಟವಾಗ್ತಿದೆ. ಆದರೆ ಕೊರೊನಾ ಹಿನ್ನೆಲೆ ಲಾಕ್ ಡೌನ್ ಅನಿವಾರ್ಯ ಹೀಗಾಗಿ ಜನರಿಗೆ ಅಗತ್ಯ ವಸ್ತುಗಳನ್ನ ಕೊಡುತ್ತಿರುವುದಾಗಿ ತಿಳಿಸಿದ್ರು.. ಈ ವೇಳೆ ಸ್ಥಳಿಯ ಕಾರ್ಪೋರೇಟರ್ಸ್ ಹಾಗೂ ಬಿಜೆಪಿ ನಾಯಕರು ಹಾಜರಿದ್ದು ಸಾಮಾಜಿಕ ಅಂತರವನ್ನ ಕಾಯ್ದುಕೊಂಡು ಜನರಿಗೆ ಕೊರೊನಾ ಅರಿವನ್ನೂ ಮೂಡಿಸಿದ್ರು.

ನ್ಯೂಸ್ ಹಾಗೂ ವಿಶೇಷ ಕಾರ್ಯಕ್ರಮಗಳಿಗಾಗಿ ಕರ್ನಾಟಕ ಟಿವಿ ಯುಟ್ಯೂಬ್ ಚಾನಲ್ ನೋಡಿ

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ

- Advertisement -

Latest Posts

Don't Miss