ಕರ್ನಾಟಕ ಟಿವಿ : ನಟ ನೆನಪಿರಲಿ ಪ್ರೇಮ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.. ವಿಷಯ ಏನಪ್ಪಾ ಅಂದ್ರೆ ನಟ ಪ್ರೇಮ್ ಬರ್ತ್ ಡೇ ದಿನ ಅಭಿಮಾನಿಗಳು ಲಾಕ್ ಡೌನ್ ಉಲ್ಲಂಘಿಸಿ ಮನೆ ಬಳಿ ಬಂದರೆ ಎಲ್ಲರಿಗೂ ತೊಂದರೆಯಾಗುತ್ತೆ ಅಂತ ಈ ರೀತಿ ಮನವಿ ಮಾಡಿದ್ದಾರೆ..
“ನನ್ನ ಹುಟ್ಟಿದ ಹಬ್ಬ ಅಂತ ದಯವಿಟ್ಟು ಯಾರು ಮನೆ ಹತ್ತಿರ ಬರುವ ಪ್ರಯತ್ನ ಮಾಡಬೇಡಿ. ಪೊಲೀಸ್ ಡಾಕ್ಟರ್, ಸರ್ಕಾರ ಎಲ್ಲರು ನಮ್ಮ ಆರೋಗ್ಯಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಅವರ ಶ್ರಮಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ನಿಜವಾಗಿಯೂ ನಾವು ಅವರನ್ನು ಗೌರವಿಸಿವುದಾದರೇ ದಯವಿಟ್ಟು ಮನೆಯಿಂದ ಹೊರಗೆ ಬರಬೇಡಿ. ಅದರಲ್ಲೂ ನೀವೆಲ್ಲ ನನ್ನ ಕುಟುಂಬದವರು
ನಿಮಗೇನಾದರೂ ತೊಂದರೆಯಾದರೆ
ನನಗೆ ತುಂಬಲಾರದ ನಷ್ಟ. So pls ಅರ್ಥ ಮಾಡಿಕೊಳ್ಳಿ. ಫೋನ್ ಮುಖಾಂತರ wish ಮಾಡಿ ನಿಮ್ಮ ಕರೆಗಾಗಿ ಕಾದಿರುತ್ತೇನೆ,
ನಿಮ್ಮ ಬರುವಿಕೆಗಾಗಿ ಅಲ್ಲ.
ಕ್ಷಮೆಯಿರಲೀ..
– ನಿಮ್ಮ LOVELY
ಈ ರೀತಿ ಅಭಿಮಾನಿಗಳೂ ನಟ ಪ್ರೇಮ್ ಪ್ರೀತಿಯಿಂದ ಮನವಿ ಮಾಡಿದ್ದಾರೆ..
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು