Tuesday, April 29, 2025

Latest Posts

ಬಂಗಾರಪೇಟೆಯಲ್ಲಿ ಜನ ಬದಲಾವಣೆ ಬಯಸುತಿದ್ದಾರೆ.-ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ

- Advertisement -

ಕೋಲಾರ:

ಜೆಡಿಎಸ್ ಪಕ್ಷ ಬಂಗಾರಪೇಟೆ ಕ್ಷೇತ್ರದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದ್ದೆ. ಈ ಬಾರಿ ಜನರು ಬದಲಾವಣೆ ಬಯಸಿದ್ದಾರೆ. ಆ ಭಯದಿಂದ ಕಾಂಗ್ರೆಸ್ ನ ಹಾಲಿ ಶಾಸಕರು ನನ್ನ ವಿರುದ್ಧ ಅಪಪ್ರಚಾರ ಮಾಡ್ತಿದ್ದಾರೆ ಎಂದು ಬಂಗಾರಪೇಟೆ ಮೀಸಲು ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ ಹೇಳಿದರು.

ಬಂಗಾರಪೇಟೆ ಪಟ್ಟಣದ ಮನೆ ಮನೆ ಮಲ್ಲೇಶಣ್ಣ ಪ್ರಚಾರದ ವೇಳೆ ಮಾತನಾಡಿದ ಅವರು, ಜನರ ಪರ ಕೆಲಸ ಮಾಡೋಕೆ ನಾವು ಸಿದ್ಧರಿದ್ದೇವೆ. ಆ ನಂಬಿಕೆಯನ್ನ ಕುಮಾರಸ್ವಾಮಿಯವರು ನಮಲ್ಲಿ ತುಂಬಿಸಿದ್ದಾರೆ. ಎಲ್ಲಾದ್ರು ನಾವು ಹಗಲು ರಾತ್ರಿ ಕೆಲಸ ಮಾಡೋಕೆ ಸಿದ್ಧರಿದ್ದೇವೆ. ಅದನ್ನ ಜನರು ಈಗಾಗಲೇ ಒಪ್ಪಿಕೊಂಡಿದ್ದಾರೆ. ನನ್ನ ವಿರುದ್ಧ ಅಪಪ್ರಚಾರ ಮಾಡೋದ್ರಿಂದ ನನಗೆ ಮತ್ತು ನಮ್ಮ ಪಕ್ಷಕ್ಕೆ ಉಪಯೋಗ ಎಂದು ಅಪಪ್ರಚಾರ ಮಾಡುವವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಬೂದಿಕೋಟೆ, ಕಾಮಸಮುದ್ರ, ಕಸಬಾ ಹೋಬಳಿ ಎಲ್ಲಾ ಗ್ರಾಮಗಳಲ್ಲಿ ಮನೆ ಮನೆ ಮಲ್ಲೇಶಣ್ಣ ಕಾರ್ಯಕ್ರಮ ಯಶಸ್ವಿಯಾಗಿ ಉತ್ತಮ ಸ್ಪಂದನೆ ಸಿಕ್ಕಿದೆ. ಇನ್ನು ಬಂಗಾರಪೇಟೆ ಪಟ್ಟಣದಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಒಲವಿಲ್ಲ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಆದ್ರೆ ನಗರ ಪ್ರದೇಶದಲ್ಲಿ ಜೆಡಿಎಸ್ ಪಕ್ಷಕ್ಕೆ 50% ಕ್ಕೂ ಹೆಚ್ಚು ಬೆಂಬಲವಿದೆ. 2023ರ ವಿಧಾಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆಲುವ ಶತಸಿದ್ದ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಕಳೆದ 10 ವರ್ಷದಿಂದ ಹಾಲಿ ಶಾಸಕರ ಮೇಲೆ ಕ್ಷೇತ್ರದ ಜನರು ಇಟ್ಟಿದ್ದ ವಿಶ್ವಾಸ ಹುಸಿಯಾಗಿದೆ. ಬಂಗಾರಪೇಟೆ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿಯೂ ಹಾಗಿಲ್ಲ ಎಂದು ಬೇಸತ್ತು ಈ ಬಾರಿ ಪರಿವರ್ತನೆ ಬಯಸಿದ್ದಾರೆ. ಒಂದು ಅವಕಾಶ ವಿದ್ಯಾವಂತ ಯುವಕನಿಗೆ ನೀಡಬೇಕು ಎಂದು ಜನರೇ ತೀರ್ಮಾನಿಸಿದ್ದಾರೆ. ನನ್ನ ಮೇಲೆ ಇಟ್ಟಿರುವ ಭರವಸೆಯನ್ನು ಈಡೇರಿಸುತ್ತೇನೆ. ಶಾಶ್ವತವಾಗಿ ಯುವಕ ಯುವತಿಯರಿಗೆ ಬಂಗಾರಪೇಟೆಯಲ್ಲಿ‌ ಕೈಗಾರಿಕೆಗಳನ್ನು ತಂದು ಉದ್ಯೋಗ ಸೃಷ್ಟಿಸಲಾಗುತ್ತದೆ ಎಂದರು.

ಮಾರ್ಚ್ 20 ರಂದು ಬಂಗಾರಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬೃಹತ್ ಸಮಾವೇಶವನ್ನು ನಗರದ ಶ್ಯಾಮ್ ಆಸ್ಪತ್ರೆಯ ಮುಂದೆ ಖಾಲಿ ಮೈದಾನದಲ್ಲಿ ಆಯೋಜಿಸಲಾಗಿದ್ದು, ಜೆಡಿಎಸ್ ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿ ಹಲವು ಮುಖಂಡರು ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು 10 ಸಾವಿರ ಮಂದಿ ಭಾಗವಹಿಸಲಿದ್ದು, ಅಂದು ಬೈಕ್ ರ್ಯಾಲಿ, ರೋಡ್ ಶೋ ಹಮ್ಮಿಕೊಳ್ಳಲಾಗಿದೆ. ಜೆಡಿಎಸ್ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಮಲ್ಲೇಶ್ ಮುನಿಸ್ವಾಮಿ ಮನವಿ ಮಾಡಿದರು.

 

- Advertisement -

Latest Posts

Don't Miss