ಬೆಂಗಳೂರಿನಲ್ಲಿ ಭೀಕರ ಅಪಘಾತ: ಅಕ್ಕ-ತಮ್ಮ ದುರ್ಮರಣ

Banglore News:

ಬೆಂಗಳೂರು: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಅಕ್ಕ-ತಮ್ಮ ದುರ್ಮರಣಗೊಂಡ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಅಟ್ಟೂರು ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಬೆಂಗಳೂರಿನ ಶಾಜಿಯಾ ಭಾನು(26) ಇಬ್ರಾಹಿಂ ಸಾಬ್(16) ಮೃತ ದುರ್ದೈವಿಗಳು. ಡಾಬಾ ಬಳಿ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಕ್ಕೆ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾಗ್ತಿದ್ದಂತೆ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮುರುಗಮಲ್ಲ ದರ್ಗಾಗೆ ಹೋಗಿ, ಚಿಂತಾಮಣಿಯಿಂದ ಬೈಲನರಸಾಪುರಕ್ಕೆ ಬಂದು ಟೀ ಕುಡಿದು ನಂತರ ಕೋಲಾರ ಹೆದ್ದಾರಿ ಮೂಲಕ ಕಾರು ವಾಪಸಾಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಕಾರಿನಲ್ಲಿ ಒಂದೇ ಕುಟುಂಬದ 9 ಜನರು ಪ್ರಯಾಣಿಸುತ್ತಿದ್ದರು. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಟಿಪ್ಪು ಸುಲ್ತಾನ್ ಗೆ ಹೆದರದ ಕೊಡಗಿನವರು ಇನ್ನು ಸಿದ್ದು ಸುಲ್ತಾನ್ ಗೆ ಹೆದರುತ್ತಾರಾ…?

ಹನಿಟ್ರಾಪ್ ಮಾಡ್ತಿದ್ದ ನಟ ಅರೆಸ್ಟ್: 14 ಲಕ್ಷಕ್ಕೂ ಹೆಚ್ಚು ಹಣ ವಂಚನೆ

ಪಾನ್ ಕಾರ್ಡ್ ನವೀಕರಣ, ₹ 1.32 ಲಕ್ಷ ವಂಚನೆ..!

About The Author