Tuesday, March 18, 2025

Latest Posts

ಪಾನ್ ಕಾರ್ಡ್ ನವೀಕರಣ, ₹ 1.32 ಲಕ್ಷ ವಂಚನೆ..!

- Advertisement -

ಪಾನ್ ಕಾರ್ಡ್ ನವೀಕರಣ ಸೋಗಿನಲ್ಲಿ ನಗರದ ನಿವಾಸಿಯೊಬ್ಬ ಬ್ಯಾಂಕ್ ಖಾತೆಯಿಂದ ₹ 1.32 ಲಕ್ಷ ವರ್ಗಾಯಿಸಿಕೊಂಡು ವಂಚಿಸಲಾಗಿದ್ದು, ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೆ‌.ಪಿ ನಗರದ ನಿವಾಸಿ ಉಮಾಪತಿ ಈ ಬಗ್ಗೆ ದೂರು ನೀಡಿದ್ದಾರೆ. ದೂರು ದಾರರು ಎಚ್.ಡಿ.ಎಫ್.ಸಿ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಇವರಿಗೆ ಕರೆ ಮಾಡಿದ ಅಪರಿಚಿತ, ಪಾನ್ ಕಾರ್ಡ್ ನವೀಕರಣ ಮಾಡಿಸಿ. ಇಲ್ಲದ್ದಿದರೆ ಖಾತೆ ಬಂದ್ ಆಗುತ್ತದೆ ಎಂದಿದ್ದ. ಜೊತೆಗೆ, ಲಿಂಕ್ ಕಳುಹಿಸಿ ಭರ್ತಿಮಾಡುವಂತೆ ಸೂಚಿಸಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.

ಅಪರಿಚಿತನ ಮಾತು ನಂಬಿದ್ದ ದೂರುದಾರ ಅದರಂತೆ ಮಾಹಿತಿ ಭರ್ತಿಮಾಡಿ ಮೊಬೈಲ್ ಗೆ ಬಂದ ಒಟಿಪಿಯನ್ನು ಆರೋಪಿಗೆ ನೀಡಿದ್ದರು. ಆ ಬಳಿಕ ಖಾತೆಯಿಂದ ₹ 1.32 ಲಕ್ಷ ಕಡಿತವಾಗಿದೆ. ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಪೊಲೀಸರಿಗೆ ದೂರುದಾರ ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೊನೋ ಆಫ್ ಪ್ರತಿನಿಧಿ ಸೋಗಿನಲ್ಲಿ ಗ್ರಾಹಕರೊಬ್ಬರ ಖಾತೆಯಿಂದ ₹ 1.32 ಲಕ್ಷ ವರ್ಗಾಯಿಸಿ ಕೊಂಡು ವಂಚಿಸಿಲಾಗಿದೆ. ಈ ಬಗ್ಗೆ 72 ವರ್ಷದ ವೃದ್ದೆ, ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

 

- Advertisement -

Latest Posts

Don't Miss