ಬೆಂಗಳೂರು ಮೆಟ್ರೋ ಕಾಮಗಾರಿಗೆ ಇನ್ನೆಷ್ಟು ಬಲಿ ಬೇಕು..?!

Banglore News:

ಬೆಂಗಳೂರಿಗರೇ ಬೆಚ್ಚಿ ಬೀಳುವ ಘಟನೆ ನಡೆದಿದೆ.ಬೆಂಗಳೂರಿನ ಹೆಚ್ ಬಿ ಆರ್ ಲೇ ಔಟ್ ಬಳಿ  ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಕಾಮಗಾರಿಯ  ಕಬ್ಬಿಣದ ರಾಡ್  ಗಳು ತುಂಬಿದ್ದ ಫಿಲ್ಲರ್ ಉರುಳಿ ಅಮಾಯಕ  ಜೀವಗಳು ಬಲಿಯಾಗಿವೆ. 28  ವರ್ಷದ ತೇಜಸ್ವಿನಿ ಮತ್ತು ಎರಡೂವರೆ ವರ್ಷದ ಮಗು ವಿಹಾನ್ ಮೃತ ದುರ್ದೈವಿಗಳು.ಅದೃಷ್ಟವಶಾತ್  ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೊಂದು  ಮಗುವಿಗೂ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಪಡೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ.

ಮೂಲತಃ ದಂಪತಿ ದಾರವಾಡ ಮೂಲದವರಾಗಿದ್ದು ಲೋಹಿತ್ ಕುಮಾರ್ ಹಾಗು  ತೇಜಸ್ವಿನಿ ವೃತ್ತಿಯಲ್ಲಿ ಎಂಜಿನಿಯರ್ ಗಳಾಗಿದ್ದರು.ಲೋಹಿತ್ ಕುಮಾರ್  ಸಿವಿಲ್ ಇಂಜಿನಿಯರ್ ಆಗಿದ್ದು ತೇಜಸ್ವಿನಿ ಮೋಟೋರೋಲೋ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ದುರ್ವಿಧಿ ಇವರ ಬಾಳಲ್ಲಿ  ಹೀನಾಯ ಆಟವಾಡಿತು. ಕಳಪೆ ಕಾಮಗಾರಿಯ ಕುರಿತು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಬೆಂಗಳೂರಲ್ಲಿ ಇನ್ನೆಷ್ಟು ಬಲಿ ಬೇಕು ಎಂದು ಪ್ರಶ್ನಿಸುತ್ತಿದ್ದಾರೆ.

ಗುಂಡಿನ ದಾಳಿಗೆ ಯುವಕ ಬಲಿ..?!

ನದಿಗೆ ವಿಷಕಾರಿ ಕೆಮಿಕಲ್ಸ್ ಸುರಿದು ವಿಕೃತಿ : ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಕ್ರೋಶ:

ಜನವರಿ 12 ಮತ್ತು 19 ರಂದು ರಾಜಕ್ಕೆ ಆಗಮಿಸಲಿರುವ ಪ್ರಧಾನ ಮಂತ್ರಿ

About The Author