Banglore news:
ಬೆಂಗಳೂರಿನಲ್ಲಿ ಮಹಾಮಳೆಗೆ ಜನಜೀವನ ಹೈರಾಣಾಗಿದೆ. ಮಹದೇವಪುರದಲ್ಲಿ ಮಳೆಯಾರ್ಭಟಕ್ಕೆ ಬೆಳ್ಳಂದೂರು ಸರ್ಜಾಪುರ ರಸ್ತೆ ಜಲಾವೃತವಾಗಿದೆ. ಹಲವು ಲೇಔಟ್ ಗಳಲ್ಲಿನ ನಿವಾಸಿಗಳಿಗೆ ಜಲದಿಗ್ಬಂದನ ಏರ್ಪಟ್ಟಿದೆ. ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ರೈನ್ಬೋ ಲೇಔಟ್, ಕಂಟ್ರಿ ಸೈಟ್ ಸೇರಿದಂತೆ ಹಲವು ಲೇಔಟ್ ಗಳು ಮುಳುಗಡೆಯಾಗಿವೆ. ಕೆರೆಗಳು ತುಂಬಿ ಕೋಡಿ ಹೋಗುತ್ತಿದ್ದು, ಹೆಚ್ಚಿದ ನೀರಿನ ಮಟ್ಟದಿಂದ ಲೇಔಟ್ ಗಳಲ್ಲಿ ಐದಾರು ಅಡಿಗಳಷ್ಟು ನೀರು ತುಂಬಿ ಅವಾಂತರವೇ ಸೃಷ್ಟಿಯಾಗಿದೆ. ಮನೆಗಳಲ್ಲಿನ ವಸ್ತುಗಳೆಲ್ಲವೂ ನೀರು ಪಾಲಾಗಿರುವುದರಿಂದ ಕುಡಿಯಲು, ಬಳಕೆಗೆ ಶುದ್ಧ ನೀರಿಲ್ಲದೆ ನಿವಾಸಿಗಳ ಪರದಾಟ ಪಡುವಂತಾಗಿದೆ. ಅನ್ನ- ನೀರಿಗೂ ಸಹ ಪರದಾಟ ನಡೆಸುತ್ತಿರುವ ನಿವಾಸಿಗಳ ಪರಿಸ್ಥಿತಿ ಹೇಳತೀರದಾಗಿದೆ. ಸರ್ಜಾಪುರದಲ್ಲಿ ವಿಪ್ರೊ ಕಂಪನಿಯ ಒಳಗೆ ನುಗ್ಗಿದ ಬಾರಿ ಪ್ರಮಾಣದ ನೀರು ತುಂಬಿದ್ದು ಹಲವು ಕಂಪನಿಗಳಿಗೆ ರಜೆ ನೀಡಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡುವಂತಾಗಿದೆ. ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿ ಬಳಿ ನಾಲ್ಕೈದು ಕಿಲೋಮೀಟರ್ ರಸ್ತೆ ಜಲಾವೃತವಾಗಿರುವುದರಿಂದ, ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ನಿಂದ ಸಿಲುಕಿ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿತ್ತು. ಹಾಗೆಯೇ ಜಲಾವೃತಗೊಂಡ ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿರುವ ವಾಹನಗಳಿಂದಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುವಂತಾಗಿದೆ.
ಬಾಗಲಕೋಟೆ: ಸೆ.7, 8ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ