Monday, December 23, 2024

Latest Posts

ಬೆಂಗಳೂರಿಗರ ನೆರವಿಗೆ ನಿಂತ ಕಿಚ್ಚ ಸುದೀಪ್…!

- Advertisement -

Banglore News:

ಕರುನಾಡ  ಚಕ್ರವರ್ತಿ  ಕಿಚ್ಚ ಸುದೀಪ್  ಇದೀಗ ಬೆಂಗಳೂರಿಗೆ  ಸಂಜೀವಿನಿಯಾಗಿದ್ದಾರೆ. ಹೌದು  ದೋಸೆ, ಸಧ್ಯ ತಿನ್ನುತ್ತಾ ಫುಲ್  ಬ್ಯುಸಿಯಾಗಿರೋ ರಾಜಕಾರಣಿಗಳ ಮಧ್ಯೆ ಇದೀಗ ನಟ ಸುದೀಪ್ ಬೆಂಗಳೂರು ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ.

ಕರುನಾಡಿನ ಅಭಿಮಾನಿಗಳ ಪಾಲಿನ ಮಾಣಿಕ್ಯ ಇದೀಗ ಕರುನಾಡ ಜನತೆಗೆ  ಬೆಂಗಾವಲಾಗಿ ನಿಂತಿದ್ದಾರೆ. ಹೌದು ಮಹಾಮಳೆಯಿಂದಾಗಿ  ಕರುನಾಡು ತತ್ತರಿಸಿ ಹೋಗಿದೆ. ಬೆಂಗಳೂರಿನ ಜನರಂತೂ ಹೈರಾಣಾಗಿ ಹೋಗಿದ್ದಾರೆ. ತಮ್ಮ ಸಹಾಯಕ್ಕಾಗಿ ರಾಜಕೀಯ ನೇತಾರರ ಆಮೆ ನಡಿಗೆ ನೋಡಿ ಇದೀಗ ಕರುನಾಡ  ಚಕ್ರವರ್ತಿ ಕಿಚ್ಚ ಸುದೀಪ್ ಸಂಜೀವಿನಿಯಾಗಿದ್ದಾರೆ. ನೆರೆಹಾನಿ ಪೀಡಿತ ಪ್ರದೇಶದ ಜನರಿಗೆ  ಇದೀಗ  ಸಹಾಯವಾಣಿಯಾಗಿದ್ದಾರೆ ಕಿಚ್ಚ ಸುದೀಪ್ .

ತನ್ನ ಚಾರಿಟೇಬಲ್ ಟ್ರಸ್ಟ್ ಆದ ಕಿಚ್ಚ ಸುದೀಪ್  ಚಾರಿಟೇಬಲ್ ಸೊಸೈಟಿ ಇಂದ್ರ  ಧನುಷ್  ಮೂಲಕ  ಜನ ರಿಗೆ  ಸಹಾಯ ಮಾಡಲು  ಮುಂದಾಗಿದ್ದಾರೆ. ಜನರು 6360334455 ನಂಬರ್  ಗೆ  ಕರೆ ಮಾಡಿ ಈ ನೆರವನ್ನು ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.  ಈ  ನಂಬರ್ ಗೆ ಕರೆ ಮಾಡಿದ್ರೆ ಮನೆ ಬಾಗಿಲಿಗೆ ಆಹಾರ ಹಾಗು ಔಷಧಗಳನ್ನು  ಪೂರೈಸಲಾಗುತ್ತದೆ ಎಂಬುವುದಾಗಿ ತಿಳಿಸಿದ್ದಾರೆ. ಹೀಗೆ ಬೆಂಗಳೂರಿಗರ ಪಾಲಿಗೆ ಸಹಾಯ ಹಸ್ತವಾಗಿದ್ದಾರೆ ಸುದೀಪ್.

ಒಟ್ಟಾರೆ ಸುದೀಪ್ ಈ ಮಹತ್ತರವಾದ ಕಾರ್ಯಕ್ಕೆ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಮೋಜಿನ ಸೋಗಿನಲ್ಲಿರೋ ರಾಜಕಾರಣಿಗಳು  ಇನ್ನಾದರೂ  ಎಚ್ಚೆತ್ತುಕೊಳ್ಳಲಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ನಂದು ಬಗ್ಗೆ ಸಿಟ್ಟಾಗಿದ್ಯಾಕೆ ಜಯಶ್ರೀ..!

ಬಿಗ್ ಬಾಸ್ ಸೀಸನ್ 9ಗೆ ಕಾಲಿಡಲಿದ್ದಾರಾ ಕಾಫಿನಾಡು ಚಂದು…!

‘Case of ಕೊಂಡಾಣ’ ಚಿತ್ರದ ಮುಹೂರ್ತ: ದೇವಿಪ್ರಸಾದ್ ಶೆಟ್ಟಿ ಜೊತೆ ಮತ್ತೆ ಕೈಜೋಡಿಸಿದ ಚಿನ್ನಾರಿ ಮುತ್ತ

- Advertisement -

Latest Posts

Don't Miss