Sunday, September 8, 2024

Latest Posts

ಸಾಲದಬಾಧೆ ತಾಳಲಾಗದೆ ಕೊರಳಿಗೆ ನೇಣು ಬಿಗಿದುಕೊಂಡ ರೈತ..!

- Advertisement -

ಗದಗ : ರೈತ ದೇಶದ ಬೆನ್ನೆಲುಬು ಅಂತಾರೆ,  ಅದರೆ ಅಂತಹ ರೈತರೆ ಇಂದು ಅವನತಿ ಹಂತಕ್ಕೆ ತಲುಪುತ್ತಿದ್ದಾರೆ. ಜಮೀನಿನ ಅಭಿವೃದ್ದಿಗಾಗಿ ಬ್ಯಾಂಕಿನಲ್ಲಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಆತ್ಮಹತ್ಯೆಗೆ ತುತ್ತಾಗುತ್ತಿದ್ದಾನೆ. ಇಂದು ಬೆಳಿಗ್ಗೆ ಇಂತಹದ್ದೇ ಘಟನೆಯೊಂದು ನಡೆದಿದೆ.

ಗದಗ ತಾಲೂಕಿನ ಹರ್ಲಾಪುರ ಗ್ರಾಮದ ಪರಸಪ್ಪ ರಾಮಪ್ಪ ಉಮಚಗಿ ಎನ್ನುವ ರೈತ ಸಾಲದ ಸುಳಿಯಲ್ಲಿ ಸಿಲುಕ ನೇಣಿಗೆ ಶರಣಾಗಿದ್ದಾನೆ. ಪರಸಪ್ಪನ ತಂದೆ ರಾಮಪ್ಪ ಕೆನರಾ ಬ್ಯಾಂಕಿನಲ್ಲಿ ಒಂದು ಲಕ್ಷದ 20 ಸಾವಿರ ರೂ ಗಳ ಪಡೆದಿರುತ್ತಾರೆ ಆದರೆ ರಾಮಪ್ಪ ನಿಧನ ಹೊಂದುತ್ತಾರೆ. ನಿಧನದ ನಂತರ ರಾಮಪ್ಪನ ಸಾಲವನ್ನು ಮರುಪಾವತಿ ಮಾಡುವಂತೆ ಬ್ಯಾಂಕ್ ಸಿಬ್ಬಂದಿಗಳು ಪರಸಪ್ಪನ ಮೇಲೆ ಒತ್ತಡ ಹೇರುತ್ತಾರೆ.

ಬ್ಯಾಂಕಿನ ಒತ್ತಡಕ್ಕೆ ಮಣಿದ ಪರಸಪ್ಪ ಹೊರಗಡೆ ಕೈಗಡ ಪಡೆದು ಬ್ಯಾಂಕ್ ಸಾಲ ತೀರುಸುತ್ತಾನೆ. ಸಾಲ ಮರುಪಾವತಿ ನಂತರ ಬ್ಯಾಂಕಿನ ಸಿಬ್ಬಂದಿಗಳು ಮೂರು ವರ್ಷ ನಿಮಗೆ ಸಾಲ ನೀಡಲು ಆಗುವುದಿಲ್ಲ ಎಂದು ಹೇಳುತ್ತಾರೆ . ಆದರೆ ಬ್ಯಾಂಕಿನ ಸಾಲವನ್ನೇ ನಂಬಿ ಕೈಗಡ ಪಡೆದಿದ್ದ ಪರಸಪ್ಪನಿಗೆ ಆಕಾಶವೇ ಕಳಚಿ ಬದ್ದಂತೆ ಆಗಿ ಇದರಿಂದ ಬೇಸತ್ತು ಒತ್ತಾಯಕ್ಕೆ ಮಣಿದು ಹೊರಗಡೆ ಕೈ ಗಾಡ ತಂದು ಬ್ಯಾಂಕ್ ಸಾಲಾ ತೀರಿಸಿದ್ದ ಪರಸಪ್ಪ ಬೆಳಂಬೆಳ್ಳಿಗ್ಗೆ  ಸುಮಾರು 6 .30 ರಿಂದ 7 ಗಂಟೆಯ ಸುಮಾರಿಗೆ ಬಹಿರ್ದೆಸೆಗೆ ಹೋಗುವ ನೆಪದಲ್ಲಿ ಹೊಲಕ್ಕೆ ಹೋಗಿ ಗಿಡಕ್ಕೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಕ್ಸೋ ಪ್ರಕರಣ-ಹುಬ್ಬಳ್ಳಿ ಕಸಬಾ ಠಾಣೆಯ ಪೊಲೀಸರಿಂದ ಸಂತ್ರಸ್ತೆಗೆ ಮಾನಸಿಕ ಕಿರುಕುಳ ಆರೋಪ

Sheep: ದೇವಸ್ಥಾನದ ಬಳಿ ಕುರಿ ಬಲಿ ನೀಡಿದ ಮೂವರ ವಿರುದ್ಧ ಎಫ್‌ಐಆರ್!

ಜಾತ್ರಾ ಮೆರವಣಿಗೆ ವೇಳೆ ಗಲಾಟೆ, ಪೊಲೀಸರ ಮೇಲೆ ಕಲ್ಲು ತೂರಾಟ..!

- Advertisement -

Latest Posts

Don't Miss