Hubli News: ಹುಬ್ಬಳ್ಳಿ: ಬಾನು ಮುಷ್ತಾಕ್ ಅವರೇ ನಮ್ಮ ಹಿಂದೂತ್ವದ ಪ್ರತೀಕವಾದ ಚಾಮುಂಡೇಶ್ವರಿಯ ಪೂಜೆಗೆ ನೀವು ಸೀರೆ ಉಟ್ಟು, ಕುಂಕುಮ, ಅರಿಶಿಣ, ಹೂವು ಮುಡಿದುಕೊಂಡು ಬಂದು ದಸರಾ ಉದ್ಘಾಟನಾ ಮಾಡಿ ಮೇಡಂ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಭಾಷಣದ ವೇಳೆ ಮೈಸೂರು ದಸರಾ ಬಗ್ಗೆ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ರನ್ನು ಆಹ್ವಾನ ನೀಡಲಾಗಿದೆ. ಅವರ ಮೇಲೆ ಗೌರವ ಇದೆ. ಆದರೆ ಹಿಂದೂ ಧಾರ್ಮಿಕ ಶ್ರೇಷ್ಠ ಭಾವನೆ ಮುಖಟವಾಗಿರುವ ದಸರಾ ಉದ್ಘಾಟನೆ ಅವರ ಕೈಯಲ್ಲಿ ಅವಶ್ಯಕತೆ ಇತ್ತಾ..? ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಬಾನು ಮುಷ್ತಾಕ್ ನಿಮಗೆ ಆತ್ಮಸಾಕ್ಷಿ ಇಲ್ವ ನೀವು ಹೇಗೆ ಒಪ್ಪಿಕೊಂಡಿದ್ದೀರಿ…? ಭುವನೇಶ್ವರಿ ಬಗ್ಗೆ ಮಾತನಾಡುತ್ತಾರೆ ನಾವು ಕಾವೇರಿಯನ್ನು ದೇವತೆ ಎನ್ನುತ್ತೇವೆ. ಅದಕ್ಕೆ ಪೂಜೆ ಮಾಡತ್ತಿವಿ ಬಾನು ಮೇಡಂ ಅದರ ನೀರು ಹೇಗೆ ಕುಡಿತ್ತಿರಾ? ನಿಮ್ಮ ಗಂಟಲೊಳಗೆ ನೀರು ಹೇಗೆ ಹೋಗುತ್ತೇ ಎಂದು ಪ್ರಶ್ನಿಸಿದರು.
ನಾವು ನೆಲ, ಜಲ, ಪರಿಸರದಲ್ಲಿ ದೇವರನ್ನು ಕಾಣತ್ತಿವಿ ಅದು ನಮ್ಮ ಧರ್ಮ. ಮರಭೂಮಿಯಲ್ಲಿ ಮರಳಿನಲ್ಲಿ ಹುಟ್ಟಿದ ಧರ್ಮ ನಮ್ಮದಲ್ಲಾ. ಬಾನು ಮೇಡಂ ನಮ್ಮ ಧರ್ಮ ಹಬ್ಬದ ಉದ್ಘಾಟನೆಗೆ ನಿಮ್ಮ ಮನಸ್ಸಾದ್ರೂ ಹೇಗೆ ಒಪ್ಪುತ್ತದೆ. ವಿವಿಧತೆಯಲ್ಲಿ ಏಕತೆ ಬರೀ ಹಿಂದೂಗಳಲ್ಲಿ ಮಾತ್ರ. ಆದರೆ ಮುಸ್ಲಿಂ, ಕ್ರಿಶ್ಚಿಯನ್ ರನಲ್ಲಿ ಇದು ಇಲ್ಲಾ. ನಾನು ದೇವರನ್ನು ದೇವಿಯಲ್ಲಿ ಕಾಣುತ್ತೆವೆ. ನಿಮ್ಮ ಧರ್ಮದಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳತ್ತಿರಿ ಎಂದು ಅವರು ಹೇಳಿದರು.

