Wednesday, April 24, 2024

Latest Posts

ಅತ್ಯಾಚಾರ ಪ್ರಕರಣದಡಿ ಬಾರ್ಸಿಲೋನಾ ಫುಟ್‌ಬಾಲ್ ಸ್ಟಾರ್‌ಗೆ ಜೈಲು ಶಿಕ್ಷೆ..

- Advertisement -

ಬಾರ್ಸಿಲೋನಾದ ನೈಟ್ ಕ್ಲಬ್‌ನ ಬಾತ್‌ರೂಮ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ, ಬಾರ್ಸಿಲೋನಾ ಫುಟ್‌ಬಾಲ್ ಸ್ಟಾರ್‌ಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಡ್ಯಾನಿ ಅಲ್ವೇಸ್ ಮೇಲೆ ಅತ್ಯಾಚಾರ ಆರೋಪವಿದ್ದು, 4.5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 2022ರಲ್ಲಿ ಈ ಘಟನೆ ನಡೆದಿದ್ದು, ಇಂದು ಆರೋಪ ಸಾಬೀತಾದ ಹಿನ್ನೆಲೆ, ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಸಂತ್ರಸ್ತ ಯುವತಿಗೆ 1.35 ಕೋಟಿ ರೂಪಾಯಿ ಪರಿಹಾರವಾಗಿ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.

ಈ ಬಗ್ಗೆ ದೂರು ನೀಡಿದ್ದ ಯುವತಿ, ನಾನು ಒಪ್ಪಿಗೆ ಸೂಚಿಸದಿದ್ದರೂ, ಒತ್ತಾಯಪೂರ್ವಕವಾಗಿ ನನ್ನ ಮೇಲೆ ಡ್ಯಾನಿ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಳು. ಅಲ್ಲದೇ ಈಕೆಯ ಸ್ನೇಹಿತೆ ಕೂಡ ಡ್ಯಾನಿ ವಿರುದ್ಧ ಆರೋಪ ಮಾಡಿದ್ದು, ಬಾತ್‌ರೂಮ್‌ನಿಂದ ಬಂದು ಯುವತಿ ಅಳುತ್ತಲೇ ಇದ್ದಳು. ಅಲ್ಲದೇ, ಇಂಥ ವ್ಯಕ್ತಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆಂದು ಆರೋಪಿಸಿದಾಗ, ನನ್ನ ಮಾತನ್ನೂ ಯಾರೂ ನಂಬಿರಲಿಲ್ಲ. ಆದರೆ ಇಂದು ಆರೋಪ ಸಾಬೀತಾಗಿದೆ ಎಂದು ಸಂತ್ರಸ್ತೆ ಹೇಳಿದ್ದಾಳೆ.

ಬಾಲಿವುಡ್ ನಟಿಯ ಹೆಸರಲ್ಲಿ ಮಹಾ ಮೋಸ: ಸೈಬರ್ ಕ್ರೈಮ್‌ಗೆ ದೂರು

ರಾಜ್ಯದಲ್ಲಿ ಹುಕ್ಕಾಬಾರ್ ನಿಷೇಧ, ಸಿಗರೇಟ್‌ ನಿಷೇಧ ವಯೋಮಿತಿ ಹೆಚ್ಚಳ: ಸಚಿವ ಗುಂಡೂರಾವ್

ನೊಬೆಲ್ ಶಾಂತಿ ಪ್ರಶಸ್ತಿಗೆ ಎಲಾನ್ ಮಸ್ಕ್ ಹೆಸರು ನಾಮಿನೇಟ್

- Advertisement -

Latest Posts

Don't Miss