Saturday, July 27, 2024

Latest Posts

ರಾಜ್ಯದಲ್ಲಿ ಹುಕ್ಕಾಬಾರ್ ನಿಷೇಧ, ಸಿಗರೇಟ್‌ ನಿಷೇಧ ವಯೋಮಿತಿ ಹೆಚ್ಚಳ: ಸಚಿವ ಗುಂಡೂರಾವ್

- Advertisement -

Political News: ವಿಧಾನಸಭೆಯಲ್ಲಿಂದು, ಹುಕ್ಕಾಬಾರ್ ನಿಷೇಧ ಮತ್ತು ಸಿಗರೇಟ್ ನಿಷೇಧ ವಯೋಮಿತಿ ಹೆಚ್ಚಳ ಮಾಡುವ ತಿದ್ದುಪಡಿ ವಿಧೇಯಕ ಅಂಗೀಕರಿಸಲಾಯಿತು.

ರಾಜ್ಯದಲ್ಲಿ ಹುಕ್ಕಾಬಾರ್ ನಿಷೇಧಿಸಲಾಗಿದ್ದು, ಅನಧಿಕೃತವಾಗಿ ಹುಕ್ಕಾಬಾರ್ ನಡೆಸಿದರೆ, 1 ಲಕ್ಷದವರೆಗೂ ದಂಡ ವಿಧಿಸಲಾಗುವುದು ಎಂದು ಗುಂಡೂರಾವ್ ತಿಳಿಸಿದ್ದಾರೆ. ಅಲ್ಲದೇ 21 ವರ್ಷ ದಾಟಿದವರಿಗೆ ಮಾತ್ರ ಸಿಗರೇಟ್ ಮಾರಾಟ ಮಾಡಬಹುದು. ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಮಾಡುವಂತಿಲ್ಲವೆಂದು ನಿಯಮ ಜಾರಿಗೆ ತರಲಾಯಿತು.

ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ ಹಾಗೂ ಸಿಗರೇಟ್‌ ನಿಷೇಧ ವಯೋಮಿತಿ ಹೆಚ್ಚಳ ಮಾಡುವ ಮಹತ್ವದ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ‌ಅಂಗೀಕಾರವಾಗಿದೆ. 2024 ನೇ ಸಾಲಿನ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಕರ್ನಾಟಕ ತಿದ್ದುಪಡಿ ವಿಧೇಯಕ ವಿರೋಧ ಪಕ್ಷಗಳ ಮೆಚ್ಚುಗೆ ಜೊತೆಗೆ ಅಂಗೀಕಾರಗೊಂಡಿದೆ.

ಕರ್ನಾಟಕದಲ್ಲಿ ಸಿಗರೇಟು ನಿಷೇಧದ ವಯೋಮಿತಿಯನ್ನು‌ 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಶಾಲಾ ಕಾಲೇಜು ಆವರಣದಲ್ಲಿ‌‌ ತಂಬಾಕು ಮಾರಾಟ ವಿಷೇಧ ಮಿತಿ‌ ನೂರು ಯಾರ್ಡ್ ಇದ್ದಿದ್ದನ್ನು ನೂರು ಮೀಟರ್ ಎಂದು ಬದಲಾವಣೆ ಮಾಡಲಾಗಿದೆ. ಆರೋಗ್ಯಯುತ ಕರ್ನಾಟಕ ನಿರ್ಮಾಣ ನಮ್ಮ ಆದ್ಯತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಜೂನಿಯರ್ ವಿರಾಟ್ ಆಗಮನ: ಅಕಾಯ್ ಎಂದು ನಾಮಕರಣ

ದಂತ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಸಾವನ್ನಪ್ಪಿದ ಮಧುಮಗ..

ಕ್ಲಾಸಿನಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್

- Advertisement -

Latest Posts

Don't Miss