health tips
ಸಾಮಾನ್ಯವಾಗಿ ಎಲ್ಲರು ಶೂ,ಚಪ್ಪಲಿ ಇಲ್ಲದೆ ಒಂದು ಹೆಜ್ಜೆಯೂ ಹೊರಗಡೆ ಇಡುವುದಿಲ್ಲ ಆದರೆ, ಬರಿಗಾಲಲ್ಲಿ ನಡೆಯುವುದು ಎಷ್ಟು ಆರೋಗ್ಯಕರ ಎಂದು ನಿಮಗೆ ಗೊತ್ತೇ ? ಹೌದು, ಬರಿಗಾಲಲ್ಲಿ ನಡೆಯವುದರಿಂದ, ಅನೇಕ ಅರೋಗ್ಯ ಪ್ರಯೋಜನಗಳಿದೆ, ಆದರೆ ನಾವು ಅದನ್ನು ಲೆಕ್ಕಿಸುವುದಿಲ್ಲ ಕಾಲಿನ ಅಂದಕ್ಕಾಗಿ ದುಬಾರಿಯಾದ ಶೂ, ಚಪ್ಪಲಿಗಳನ್ನ ಖರೀದಿಸುತ್ತೇವೆ ,ಇದರಿಂದ ನಿಮ್ಮ ಪಾದ ಸ್ವಚ್ಛವಾಗಿ ಅಂದವಾಗಿ ಕಾಣಿಸುತ್ತದೆ ಹೊರತು ಆರೋಗ್ಯಕ್ಕೆ ಯಾವುದೇ ಪ್ರಯೋಜನವಿರುವುದಿಲ್ಲ ,ಹಾಗಾದರೆ ಬರಿಗಾಲಲ್ಲಿ ನಡೆಯುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ನೋಡೋಣ ಬನ್ನಿ …
ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ ಮಾನಸಿಕವಾಗಿ ಶಾಂತಿ ದೊರೆಯುವುದಲ್ಲದೆ ಇದು ನಿಮ್ಮ ದೇಹದ ಕಾರ್ಯ ನಿರ್ವಹಣೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ ಹಾಗು ಒತ್ತಡವನ್ನು ಕಡಿಮೆ ಮಾಡುತ್ತದೆ .ಒತ್ತಡದಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ ರಕ್ತ ಸಂಚಾರ ಸುಗಮಗೊಳ್ಳುತ್ತದೆ ಇದರಿಂದ ರಕ್ತನಾಳಗಳ ಊತ ಉಂಟಾಗುವುದಿಲ್ಲ. ಬರಿಗಾಲಲ್ಲಿ ನಡೆಯುವುದರಿಂದ ನರಮಂಡಲವನ್ನು ನಿಯಂತ್ರಿಸಬಹುದು .ನೀವು ಬರಿಗಾಲಿನಲ್ಲಿ ನಡೆಯುವಾಗ ವಿದ್ಯುತ್ ಪ್ರವಾಹಗಳು ಭೂಮಿಯಿಂದ ನಿಮ್ಮ ಪಾದಗಳ ಮೂಲಕ ಚಲಿಸುತ್ತವೆ ಈ ಮೂಲಕ ನಿಮ್ಮ ನರಮಂಡಲ ನಿಯಂತ್ರಣದಲ್ಲಿರುತ್ತದೆ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಲು ಸ್ನಾಯುಗಳು ಮತ್ತು ಕೀಲು ನೋವು ಕಡಿಮೆಯಾಗಲು ಇದು ಒಂದು ಮಾರ್ಗವಾಗಿ ಆಯ್ಕೆ ಮಾಡಿಕೊಳ್ಳ ಬಹುದು ಇದರಿಂದ ಉತ್ತಮ ನಿದ್ರೆಯ ಜೊತೆಗೆ ದೇಹದಲ್ಲಿ ಉಂಟಾಗುವ ಮೈಕೈನೋವು ಸೊಂಟನೋವು ಕಡಿಮೆಯಾಗುತ್ತದೆ ಎನ್ನಲಾಗಿದೆ . ದೇಹದಲ್ಲಿನ ಗ್ಲೂಕೋಸ್ ನ್ನು ನಿಯಂತ್ರಿಸಲು ಬರಿಗಾಲಿನಲ್ಲಿ ನಡೆಯುವುದು ಉತ್ತಮವಾಗಿದೆ ಎಂಬುದು ಸಂಶೋಧಕರ ಮತಾಗಿದೆ .
ಹಾಗೆಯೆ ರೋಗಾಣುಗಳ ವಿರುದ್ಧ ಹೋರಾಡಲು ಸಹಾಯವಾಗುತ್ತದೆ ಹಾಗು ಪಾದಗಳ ಕೆಳಭಾಗ ಗಟ್ಟಿಯಾಗುತ್ತದೆ ,ಇದರಿಂದ ಕಾಲಿನ ಪಾದಗಳಿಗೆ ಗಾಯವಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಾರೆ.