Haveri News: ಹಾವೇರಿ: ಮಹಿಳೆಯ“ಬ್ಬಳು ಅನುಮಾನಾಸ್ಪದ ರೀತಿಯಲ್ಲಿ ನೇಣಿಗೆ ಶರಣಾದ ಘಟನೆ, ಹಾವೇರಿಯ ಹಾನಗಲ್ ತಾಲೂಕಿನ ಕೊಪ್ಪರಸಿ ಗ್ರಾಮದಲ್ಲಿ ನಡೆದಿದೆ.
28 ವರ್ಷದ ಮಮತಾ ಶ್ರೀಧರ್ ಎಂಬಾಕೆ ಮನೆಯಲ್ಲೇ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಕೆಯ ಮೇಲೆ ಪತಿ ಪದೇ ಪದೇ ಅನುಮಾನ ಪಡುತ್ತಿದ್ದ ಎಂಬ ಆರೋಪವಿದ್ದು, ಇದೇ ವಿಚಾರಕ್ಕೆ ಇವರಿಬ್ಬರ ಮಧ್ಯೆ ಪದೇ ಪದೇ ಗಲಾಟೆ ನಡೆಯುತ್ತಿತ್ತು.
ಮತ್ತು ಮಮತಾ ಪದೇ ಪದೇ ಜಗಳವಾಡಿ ತವರು ಸೇರುತ್ತಿದ್ದಳು. ಬಳಿಕ ಆಕೆಯ ಪೋಷಕರು ಆಕೆಯನ್ನು ಸಮಾಧಾನ ಮಾಡಿ, ಗಂಡನ ಮನೆಗೆ ಕಳುಹಿಸುತ್ತಿದ್ದರು. ಇದರಿಂದ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಮನೆಯ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಮತಾ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಹಾನಗಲ್ ಪೋಲೀಸರು, ಈ ಬಗ್ಗೆ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.




