www.karnatakatv.net : ಬೆಳಗಾವಿ: ಬಿಎಸ್‌ವೈ ರಾಜೀನಾಮೆಯಿಂದ ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯದ ಬೇಸರದಲ್ಲಿದ್ರು. ಅದನ್ನು ಸರಿದೂಗಿಸಲು ಮತ್ತೋರ್ವ ವೀರಶೈವ ಲಿಂಗಾಯತ ಸಮುದಾಯದ ನಾಯಕನನ್ನು ನೇಮಕ ಮಾಡಿರುವುದು ಸ್ವಾಗತಾರ್ಹ ಎಂದು ರಂಭಾಪುರಿ ಪೀಠದ ಶ್ರೀ ಜಗದ್ಗುರು ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿಎಂ ರೇಸ್‌ನಲ್ಲಿ ನಾಲ್ಕೈದು ಜನರ ಹೆಸರು ಕೇಳಿ ಬರ್ತಿತ್ತು. ಆದ್ರೆ, ಬಸವರಾಜ್ ಬೊಮ್ಮಾಯಿ ಸರ್ವಾನುಮತದಿಂದ ಆಯ್ಕೆ ಅವರ ಪಕ್ಷದ ಒಕ್ಕಟ್ಟು, ದೂರದೃಷ್ಟಿಗೆ ಸಾಕ್ಷಿ ಎಂದರು.
ಬಿಎಸ್‌ವೈ ಪದತ್ಯಾಗದಿಂದ ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯ ಬೇಸರದಲ್ಲಿದ್ರು. ಅದನ್ನು ಸರಿದೂಗಿಸಲು ಮತ್ತೋರ್ವ ವೀರಶೈವ ಲಿಂಗಾಯತ ಸಮುದಾಯದ ನಾಯಕನ ನೇಮಕ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಚಾಣಾಕ್ಷ್ಯ ರಾಜಕಾರಣಿ, ದಕ್ಷ ಆಡಳಿತಗಾರ, ಯಾವುದೇ ಆರೋಪಗಳಿಲ್ಲ. ಹೀಗಾಗಿ ಬಿಜೆಪಿ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಹೋಗುವ ಸಾಮರ್ಥ್ಯವಿದೆ. ಬಿಎಸ್‌ವೈ ಹೆಚ್ಚಿನ ಮುತುವರ್ಜಿ ವಹಿಸಿದ್ದು ಕಾಣುತ್ತಿದೆ. ಬಿಎಸ್‌ವೈ ಮಾತಿಗೆ ರಾಷ್ಟ್ರೀಯ ನಾಯಕರು ಗೌರವ ಕೊಟ್ಟಿದ್ದಾರೆ ಎಂದು ತಿಳಿದುಕೊಂಡಿದ್ದೇವೆ ಎಂದರು.
ಮೈಸೂರು ಪ್ರಾಂತ್ಯದಲ್ಲಿ ಆಗುತ್ತಿದ್ದ ಅಭಿವೃದ್ಧಿ ಕಾರ್ಯಗಳು ಉತ್ತರ ಕರ್ನಾಟಕದಲ್ಲಿ ಆಗ್ತಿಲ್ಲ ಎಂಬ ಕೂಗು ಕೇಳಿಬರ್ತಿತ್ತು. ಬೆಳಗಾವಿಯ ಸುವರ್ಣಸೌಧದಲ್ಲಿ ಎರಡು ವರ್ಷಗಳಿಂದ ಅಧಿವೇಶನ ಆಗಿಲ್ಲ.ರಾಜಧಾನಿ ಬೆಂಗಳೂರಿನ ಕಾರ್ಯಾಲಯಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡಬೇಕು.ಇದರಿಂದ ಅಭಿವೃದ್ಧಿಗೆ ಶಕ್ತಿ ಬರುತ್ತದೆ.ಇದರ ಕಡೆ ಬೊಮ್ಮಾಯಿ ಹೆಚ್ಚಿನ ಲಕ್ಷ್ಯ ವಹಿಸಬೇಕು. ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿಗಳು ಕಾರ್ಯಕುಂಠಿತವಾಗಿದ್ದು, ಅದಕ್ಕೆ ವೇಗ ತರಬೇಕು. ಕಾವೇರಿ ಕೊಡುವ ಬೆಂಬಲವನ್ನು ಈ ಭಾಗದ ರೈತ ಸಮುದಾಯಕ್ಕೆ ನೀರಿನ ಸೌಲಭ್ಯ ಒದಗಿಸಬೇಕು. ಮೌಲ್ಯಾಧರಿತ ಶಿಕ್ಷಣಕ್ಕೆ ಒತ್ತು ನೀಡಿ ಜಾತಿ ಮತ ವರ್ಗಗಳನ್ನು ಮರೆತು ಕೆಲಸ ಮಾಡಬೇಕು ಎಂದರು.
ಈವರೆಗೂ ಬಿಜೆಪಿ ಗುಂಪುಗಳಾಗಿ ಕೆಲಸ ಮಾಡುತ್ತಿದ್ರು. ಸಿಎಂ ಬೊಮ್ಮಾಯಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು. ಬಿಎಸ್‌ವೈ ದೂರದೃಷ್ಟಿ, ಸಂಕಲ್ಪಿತ ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಕೆಲಸ ಮಾಡಲಿ ಎಂದು ಶುಭ ಹಾರಿಸಿದರು.