ತಮ್ಮೂರಿಗೆ ನೀರಿನ ವ್ಯವಸ್ಥೆ ಮಾಡಿದ್ದಕ್ಕೆ ಬಸವರಾಜ ಬೊಮ್ಮಾಯಿಗೆ ಬೃಹತ್ ಬೆಲ್ಲದ ಹಾರ ಹಾಕಿ ಗೌರವ

Mandya News: ಮಂಡ್ಯದ ಎಲೆಚಾಕನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಗ್ರಾಮಸ್ಥರು ಬೆಲ್ಲದ ಹಾರ ಹಾಕಿ ಸ್ವಾಗತ ಕೋರಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಸಚಿವರಾಗಿದ್ದಾಗ, ತಮ್ಮೂರಿನ ಕೆರೆಗೆ ನೀರು ತಂದಿದ್ದ ಹಿನ್ನಲೆ ಮಾಜಿ ಸಿಎಂಗೆ ಈ ರೀತಿ ಭರ್ಜರಿ ಸ್ವಾಗತ ಕೋರಲಾಗಿದೆ. ಕೆರೆಗೆ ಏತ ನೀರಾವರಿ ಮೂಲಕ ನೀರು ಕೊಟ್ಟಿದ್ದಕ್ಕೆ ಕ್ರೇನ್ ಮೂಲಕ 3 ಕ್ವಿಂಟಾಲ್ ಬೃಹತ್ ಬೆಲ್ಲದ ಹಾರ ಹಾಕಿ ಸ್ವಾಗತಿಸಲಾಗಿದೆ.

ತಾವು ಜಾರಿ ಮಾಡಿದ್ದ ಆ ಯೋಜನೆಗೆ ಇಂದು ಸಂಸದರಾಗಿ ಬಂದಿದ್ ಬಸವರಾಜ ಬೊಮ್ಮಾಯಿ ಅವರು
ತೂಬಿನಕೆರೆ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳ ಕೆರೆ-ಕಟ್ಟೆಗಳಿಗೆ ಲೋಕಪಾವನಿ ನದಿಯಿಂದ ತುಂಬಿಸಿ ಯೋಜನೆಯನ್ನು ಉದ್ಘಾಟಿಸಿದ್ದಾರೆ.

About The Author