Thursday, May 16, 2024

Latest Posts

CM Chair ಭದ್ರಕ್ಕಾಗಿ ಬಸವರಾಜ ಬೊಮ್ಮಾಯಿ ದೆಹಲಿ ಟೂರ್..?

- Advertisement -

www.karnatakatv.net : ವಯಸ್ಸಿನ ಕಾರಣ ನೀಡಿ ಸಿಎಂ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪರನ್ನ (B.S.Yadiyurappa) ಕೆಳಗಿಳಿಸಿದ ಬಳಿಕ ಕರುನಾಡ ಸಿಎಂ ಆಗಿ ಬಸವರಾಜ ಬೊಮ್ಮಾಯಿನ್ನು (Basavaraja Bommai) ಬಿಜೆಪಿ ಹೈಕಮಾಂಡ್ (BJP High Command) ಆಯ್ಕೆ ಮಾಡಿತ್ತು. ಕೇವಲ ಆರು ತಿಂಗಳಿಗೆ ಮಾತ್ರ ಬೊಮ್ಮಾಯಿ ಸಿಎಂ ಆಗಿರ್ತಾರೆ ಅನ್ನೋ ಮಾತುಗಳು ಸಾಕಷ್ಟು ಭಾರಿ ರಾಜಕೀಯ ನಾಯಕರ ಬಾಯಲ್ಲಿ ಕೇಳಿ ಬಂದಿದೆ. ಈಗ ಬೊಮ್ಮಾಯಿ ಸಿಎಂ ಆಗಿ 6 ತಿಂಗಳು ಅಧಿಕಾರವಾಧಿ ಪೂರ್ಣಮಾಡಿದ್ದಾರೆ. ಹೀಗಾಗಿ ಹೈಕಮಾಂಡ್ ತಮಗೆ ಕೊಟ್ಟಿರೋ ಡೆಡ್ ಲೈನ್ (Dead line) ಮುಕ್ತಾಯವಾಗಿದೆ. ಹೀಗಾಗಿ ತಮ್ಮ ಸ್ಥಾನ ಭರ್ತಿಗೆ ಸಂಸದರ ಸಭೆ ನೆಪದಲ್ಲಿ ದೆಹಲಿಯಾತ್ರೆಗೆ ಹೊರಟಿದ್ದಾರೆ. ಯಾಕೆ ಈ ಅನುಮಾನ ಅಂದ್ರೆ ಪಂಚರಾಜ್ಯ ಚುನಾವಣೆ (Five State Elections) ಪ್ರಚಾರದಲ್ಲಿ ಹೈಕಮಾಂಡ್ ನಾಯಕರು ಬ್ಯುಸಿಯಾಗಿದ್ದಾರೆ. ಇದೇ ಟೈಂನಲ್ಲಿ ಸಿಎಂ ಬೊಮ್ಮಾಯಿ ದೆಹಲಿಗೆ ಹೊರಟಿದ್ದಾರೆ. ಸಂಪುಟ ವಿಸ್ತರಣೆ ಮಾಡ್ತೇವೆ ಹೈಕಮಾಂಡ್ ಜತೆ ಮಾತಾಡ್ತೇನೆ ಅನ್ನೋದು ಕೇವಲ ನೆಪಮಾತ್ರಕ್ಕೆ ಅನ್ನೋದು ಒಳಮರ್ಮವಾಗಿದೆ. ಸರ್ಕಾರದ 6ತಿಂಗಳಲ್ಲಿ ಮಾಡಿರೋ ಸಾಧನೆಯನ್ನು ಬಿಜೆಪಿ ಹೈಕಮಾಂಡ್ ಮುಂದೆ ಇಡಲು ಸಿಎಂ ಬಸವರಾಜ ಬೊಮ್ಮಾಯಿ ತಯಾರಿ ನಡೆಸಿದ್ದಾರಂತೆ.ಅಷ್ಟಕ್ಕೂ ಬಿಜೆಪಿ ಹೈಕಮಾಂಡ್ ಮುಂದೆ ಬೊಮ್ಮಾಯಿ ಏನೆಲ್ಲಾ ಹೇಳಲಿದ್ದಾರೆ ಅಂತಾ ನೋಡುವುದಾದ್ರೆ. ಕರ್ನಾಟಕ ಸರ್ಕಾರದ 6ತಿಂಗಳ ಸಾಧನೆ ಮತ್ತು ಸವಾಲುಗಳಪಟ್ಟಿ. ಕೊರೋನಾ ಮೂರನೇ ಅಲೆ ಭೀತಿಯನ್ನ ಸಮರ್ಥವಾಗಿ ನಿರ್ವಹಿಸಿದ್ದೇವೆ ಕೊರೋನಾ ವ್ಯಾಕ್ಸಿನೇಷನ್ (Corona Vaccination) ಪೂರ್ಣ ಪ್ರಮಾಣದಲ್ಲಿ ಆಗುವ ಹಾಗೇ ಮಾಡಿದ್ದೇವೆ ನಟ ಪುನೀತ್ ರಾಜ್ ಕುಮಾರ್ (Puneet RajKumar) ಅಂತ್ಯಕ್ರಿಯೆ ಕಾರ್ಯ ಗದ್ದಲ ಇಲ್ಲದೇ ನಿಭಾಯಿಸಿದ್ದೇನೆ ಬೆಳಗಾವಿ ಅಧಿವೇಶನ ಮೂಲಕ ಉ.ಕ.ಭಾಗದ ಜನರ ಬೆಂಬಲ ಪಡೆದಿರುವೆ ಇದು ಮುಂದಿನ 2023ರ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭತರಲಿದೆ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ (Conversion Prohibition Act) ಅಂಗೀಕಾರ ಯಶಸ್ವಿ ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿರುವೆ BSY ಸಿಎಂ ಸ್ಥಾನದಿಂದ ಕೆಳಗಿಳಿಗ ಬಳಿಕ ಇದ್ದ ಅಸಮಾಧಾನ ಕಡಿಮೆ ಮಾಡಿದ್ದೇನೆ ಮುಂಬರುವ ಬಿಬಿಎಂಪಿ, ತಾಲೂಕು, ಜಿಲ್ಲಾಪಂಚಾಯ್ತಿ ಎಲೆಕ್ಷನ್ನಲ್ಲಿ ಅಧಿಕಾರದ ಭರವಸೆ ಹೌದು ಹೀಗೆ ತಮ್ಮ ಸಾಧನೆ ಮತ್ತು ಸವಾಲುಗಳನ್ನು ಬಿಜೆಪಿ ಹೈಕಮಾಂಡ್ ಮುಂದೆ ಎಳೆಎಳೆಯಾಗಿ ಬಿಚ್ಚಿಡಲು ಸಿಎಂ ಬಸವರಾಜ ಬೊಮ್ಮಾಯಿ ಸಜ್ಜಾಗಿದ್ದಾರೆ. ಹೈಕಮಾಂಡ್ ಮುಂದೆ ತಾವು ಆಕ್ಟೀವ್ ಸಿಎಂ ಅಂತಾ ಒಮ್ಮೆ ಸಾಬೀತು ಪಡಿಸಿದ್ರೆ..ತಮ್ಮ ಖುರ್ಚಿ ಭದ್ರವಾಗಲಿದೆ ಅನ್ನೋ ಲೆಕ್ಕಾಚಾರ ಸಿಎಂ ಬೊಮ್ಮಾಯಿ ಅವರದ್ದಾಗಿದೆ ಅನ್ನೋ ಮಾತುಗಳು ಕೇಳಿಬಂದಿವೆ.

ರೂಪ ವಿಶ್ವಾಸ್, ಕರ್ನಾಟಕ ಟಿವಿ,ದಾವಣಗೆರೆ.

- Advertisement -

Latest Posts

Don't Miss