‘ ಬಿಗ್ ಬಾಸ್ ‘ ಮನೆಯಿಂದ ಹಾಸ್ಯ ಕಲಾವಿದ ವಿನೋದ್ ಗೊಬ್ಬರಗಾಲ ಔಟ್

ಕರ್ನಾಟಕದ ಹೆಸರಾಂತ ರಿಯಾಲಿಟಿ ಶೋ ‘ ಬಿಗ್ ಬಾಸ್ ‘ ಸೀಸನ್ 9  ನೆಡೆಯುತ್ತಿದು, ಇದರ ನಿರೂಪಣೆ ಕನ್ನಡ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡಿಸಿಕೊಂಡು ಬರುತ್ತಿದ್ದಾರೆ. ಸದಾ ಒಂದಲ್ಲ ಒಂದು ಸುದ್ದಿಯಿಂದ ಸದ್ದು ಮಾಡುವ ಬಿಗ್ ಬಾಸ್ ನಿಂದ ನಿನ್ನೆ ಹಾಸ್ಯ ನಟ ವಿನೋದ್​ ಗೊಬ್ಬರಗಾಲ 9ನೇ ವಾರಕ್ಕೆ ಅವರು ತಮ್ಮ ಆಟ ಮುಗಿಸಿ ಮನೆಗೆ ತೆರಳಿದ್ದಾರೆ. ಸದಾ ಮನೆಯಲ್ಲಿ ಲವಲವಿಕೆಯಿಂದ ಇರುತ್ತಿದ್ದ ಗೊಬ್ಬರಗಾಲ ಅವರು ತಮ್ಮ ವಿಭಿನ್ನ ಶೈಲಿಯ ಮಾತುಗಾರಿಕೆಯಿಂದ ಜನರನ್ನು ಮನರಂಜಿಸುತ್ತಿದ್ದರು. ಆದರೆ  ವಿನೋದ್ ಅವರು ಈ ವಾರ ಬಿಗ್ ಮನೆಯಿಂದ ಔಟ್ ಆಗಿರೋದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ.

ಶ್ರವಣ ದೋಷವಿರುವ ಆರು ವರ್ಷದೊಳಗಿನ 500 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ : ಸಚಿವ ಕೆ. ಸುಧಾಕರ್

ಅವರು ದೊಡ್ಮನೆಯಿಂದ ಹೊರಹೋಗಿರುವುದು ಸಹ ಸ್ಪರ್ಧಿಗಳಿಗೆ ಹಾಗೂ ವಿನೋದ್  ಫ್ಯಾನ್ಸ್​​ಗೆ ಬೇಸರ ಮೂಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್​ ಅಭಿಯಾನ ಶುರು ಮಾಡಿದ್ದಾರೆ. ದೀಪಿಕಾ ದಾಸ್ ಅವರು ಈ ಮೊದಲು ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದರು. ಬಳಿಕ ಅವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಿಗ್ ಬಾಸ್ ಮನೆಗೆ ಕಾಲಿಟ್ಟರು. ಅವರು ಮರಳಿರುವುದು ಅನೇಕರಿಗೆ ಖುಷಿ ನೀಡಿದೆ. ವಿನೋದ್ ಅವರನ್ನೂ ಈ ರೀತಿ ಮತ್ತೆ ಕರೆಸಬೇಕು ಎಂದು ಅವರ ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ.  ಕೆಲವರು ‘ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ’ ಎಂಬ ಅಭಿಯಾನವನ್ನ ಶುರುಮಾಡಿದ್ದು, ಬಿಗ್ ಬಾಸ್ ತಂಡ ಯಾವ ನಿರ್ಧಾರಕ್ಕೆ ಬರುತ್ತದೆ ಎಂದು ಕಾದು ನೋಡಬೇಕಿದೆ.

2023ರಲ್ಲಿ ಮಹಾಶಿವರಾತ್ರಿ ಯಾವಾಗ..? ಲಿಂಗೋದ್ಭವ ಯಾವಾಗ ತಿಳಿದುಕೊಳ್ಳೋಣ..!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಪ್ ಹುಡಗಿ ಅದಿತಿ ಪ್ರಭುದೇವ

About The Author