Saturday, July 12, 2025

Latest Posts

ಯಲಹಂಕ ಡೈರಿ ವೃತ್ತದ ಫ್ಲೈ ಓವರ್‌ಗೆ ವೀರ್ ಸಾವರ್ಕರ್ ಹೆಸರಿಡಲು ಬಿಬಿಎಂಪಿ ತೀರ್ಮಾನ..!

- Advertisement -

ಬೆಂಗಳೂರು: ಯಲಹಂಕ ಡೈರಿ ವೃತ್ತದ ಫ್ಲೈ ಓವರ್‌ಗೆ ವೀರ್ ಸಾವರ್ಕರ್ ಹೆಸರಿಡುವ ವಿಚಾರಕ್ಕೆ ಸಬಂಧಿಸಿದಂತೆ ವಿವಾದಿತ ಜಾಗಕ್ಕೆ ವೀರ್ ಸಾವರ್ಕರ್ ಹೆಸರಿಡಲು ಪಾಲಿಕೆ ತೀರ್ಮಾನಿಸಿದೆ.

ಈ ಬಗ್ಗೆ ಇಂದು ತೀರ್ಮಾನಿಸಿದ ಬಿಬಿಎಂಪಿ, ಶ್ರೀ ವೀರ ಸಾವರ್ಕರ್ ಮೇಲ್ಸೇತುವೆ ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಿದೆ. ಕಾಂಗ್ರೆಸ್ ಸದಸ್ಯರು ಇಲ್ಲದ ವೇಳೆ ಬಿಜೆಪಿ ಈ ಬಗ್ಗೆ ನಿರ್ಣಯ ಪಡೆದಿದೆ.

ಈ ಮೊದಲು ಸಾರ್ವಕರ್ ಜರ್ನದಿನಾಚರಣೆ ಅಂಗವಾಗಿ ಹೆಸರಿಡಲು ಸರ್ಕಾರ ಮುಂದಾಗಿತ್ತು. ಆದ್ರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಆ ಸಂದರ್ಭದಲ್ಲಿ ಬಿಜೆಪಿ ನಾಯಕರು ಹಾಗಾದ್ರೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಂತ ಸಿಕ್ಕಸಿಕ್ಕ ಯೋಜನೆಗಳಿಗೆ ಬೇರೆಯವರ ಹೆಸರಿಟ್ಟಾಗ ಕನ್ನಡ ಹೋರಾಟಗಾರರು ಏನ್ಮಾಡ್ತಿದ್ರಿ ಅಂತಾಲೂ ಪ್ರತ್ಯುತ್ತರ ನೀಡಿದ್ರು.. ಯಲಹಂಕ ಶಾಸಕ ವಿಶ್ವನಾಥ್ ನಾವು ಸಾವರ್ಕರ್ ಹೆಸರು ಇಟ್ಟೇ ಇಡ್ತೀವಿ ಅಂತ ಸವಾಲು ಕೂಡ ಹಾಕಿದ್ರು. ಇದೀಗ ಬಿಜೆಪಿ ಅಧಿಕಾರ ಇರುವ ಬಿಬಿಎಂಪಿ ಹೆಸರಿಡಲು ನಿರ್ಧಾರ ಕೈಗೊಂಡಿದೆ.

ನಾಗೇಂದ್ರ, ಕರ್ನಾಟಕ ಟಿವಿ, ಬೆಂಗಳೂರು

ಮಂಡ್ಯ: ಮಂಡ್ಯದಲ್ಲಿ ಡಿಹೆಚ್‌ಓ ಕಚೇರಿಗೂ ಕೊರೊನಾ ವಕ್ಕರಿಸಿದ್ದು, ಡಿಎಚ್ಓ ಆಫೀಸ್‌ನ ಡಿ ಗ್ರೂಪ್ ನೌಕರನಿಗೆ ಕೊರೋನಾ ಸೋಂಕು ತಗುಲಿದೆ.

ಇನ್ನು ಡಿ ಗ್ರೂಪ್ ನೌಕರನಿಗೆ ಕೊರೋನಾ ಹಿನ್ನಲೆ, ಡಿಎಚ್ಓ ಕಚೇರಿ ಸೀಲ್ ಡೌನ್ ಮಾಡಲಾಗಿದೆ. ಡಿಹೆಚ್‌ಓ ಕಚೇರಿಯಲ್ಲಿ ಈ ವ್ಯಕ್ತಿ ಟೀ ಕಾಫೀ ನೀಡುತ್ತಿದ್ದ ಎನ್ನಲಾಗಿದೆ.

ಡಿ ಗ್ರೂಪ್ ನೌಕರ ಮಂಡ್ಯ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಡಿಎಚ್ಓ ಕಛೇರಿಯ ನೌಕರರಿಗೆ ಆತಂಕ ಶುರುವಾಗಿದೆ.

- Advertisement -

Latest Posts

Don't Miss