BREAKING NEWS: BBMP ವಾರ್ಡ್ ಗಳನ್ನು 198ರಿಂದ 243ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ, ಇದೀಗ ಬಿಬಿಎಂಪಿ ವಾರ್ಡ್ ಗಳನ್ನು 243ಕ್ಕೆ ಹೆಚ್ಚಿಸಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.

ಸುಪ್ರೀಂ ಕೋರ್ಟ್ ಬಿಬಿಎಂಪಿ ಚುನಾವಣೆಗೆ ಸೂಚನೆ ಹಿನ್ನಲೆಯಲ್ಲಿ, ವಾರ್ಡ್ ಗಳ ಪುನರ್ ವಿಂಗಡಣೆ ಮಾಡಿ, ಸಮಿತಿಯ ಶಿಫಾರಸ್ಸಿನಂತೆ 198 ವಾರ್ಡ್ ಗಳನ್ನು 243ಕ್ಕೆ ಏರಿಕೆ ಮಾಡಿದೆ.

ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆಯಲ್ಲಿ ವಾರ್ಡ್ ಗಳ ಸಂಖ್ಯೆನ್ನು ಹೆಚ್ಚಿಸಿ ಆದೇಶಿಸಿದ್ದು, ಈ ಗೆಜೆಟ್ ಅಧಿಸೂಚನೆಗೆ ಆಕ್ಷೇಪಣೆಗಳಿದ್ದರೇ 15 ದಿನಗಳಲ್ಲಿ ಸಲ್ಲಿಸುವಂತೆ ಸಾರ್ವಜನಿಕರನ್ನು ಕೋರಿದೆ.

ಅಂದಹಾಗೇ ಈ ಮೊದಲು ಬಿಬಿಎಂಪಿ ವಾರ್ಡ್ ಗಳು 198 ಇದ್ದವು. ಇದೀಗ 45 ವಾರ್ಡ್ ಗಳನ್ನು ಸೇರ್ಪಡೆ ಮಾಡಿ, ಗೆಜೆಟ್ ಅಧಿಸೂಚನೆ ಹೊರಡಿಸಿದೆ.

About The Author