Wednesday, August 20, 2025

Latest Posts

ನಾಯಿ ಕಚ್ಚಿದರೆ ಬಿಬಿಎಂಪಿ ಪರಿಹಾರ ಕೊಡುತ್ತೆ ಗೊತ್ತಾ.?

- Advertisement -

ನಾಯಿ ಕಚ್ಚಿದರೆ ಬಿಬಿಎಂಪಿ ಪರಿಹಾರ ಕೊಡುತ್ತೆ ಅನ್ನೋ ಮಾಹಿತಿಯೇ ಬಹುತೇಕರಿಗೆ ಇಲ್ಲ. ೬-೭ ವರ್ಷಗಳಲ್ಲಿ ನಾಯಿ ಕಚ್ಚಿಸಿಕೊಂಡವರ ಸಂಖ್ಯೆ ೫-೬ ಸಾವಿರದಷ್ಟಿದ್ರೆ ಪರಿಹಾರ ಪಡೆದುಕೊಂಡವರ ಸಂಖ್ಯೆ ೫-೬ ಅಷ್ಟೇ. ಅಂದ್ರೆ ಸಾವಿರಕ್ಕೊಬ್ಬರು ಪರಿಹಾರ ಪಡ್ಕೋತಿದ್ದಾರೆ ಅಷ್ಟೇ. ನಾಯಿ ಕಡಿತಕ್ಕೊಳಗಾದರೆ ಪರಿಹಾರ ಅಷ್ಟೇ ಅಲ್ಲಾ ಚಿಕಿತ್ಸಾ ವೆಚ್ಚವನ್ನೂ ಕೂಡ ಸರ್ಕಾರವೇ ಭರಿಸುತ್ತೆ. ನಾಯಿ ಕಚ್ಚಿದವರಿಗೆ ಸರ್ಕಾರದಿಂದ ೨-೧೦ ಸಾವಿರದವರೆಗೆ ಪರಿಹಾರ ಕೊಡ್ತಾರೆ.

ಚಿಕಿತ್ಸಾ ವೆಚ್ಚ ಕೂಡ ಬಿಬಿಎಂಪಿಯಿAದಲೇ ಪಾವತಿಯಾಗುತ್ತೆ. ಹಾಗೆ ನೋಡಿದ್ರೆ ೨೦೧೬ರಿಂದ ಇಲ್ಲಿಯವರೆಗೆ ಪ್ರತೀ ವರ್ಷ ೬-೭ ಸಾವಿರ ನಾಯಿ ಕಚ್ಚಿದ ಪ್ರಕರಣಗಳು ನಡೆದಿದ್ರೆ ಪರಿಹಾರ ಪಡೆದುಕೊಂಡಿರೋದು ಮಾತ್ರ ಕೇವಲ ೫-೧೦ ಪ್ರಕರಣಗಳಲ್ಲಿ. ಇನ್ನು ಆಸ್ಪತ್ರೆಯ ಚಿಕಿತ್ಸೆಯ ವೆಚ್ಛವನ್ನೂ ಬಹುತೇಕರು ಕೇಳೋಕೆ ಹೋಗಿಲ್ಲ. ನಾಯಿ ಕಚ್ಚಿದವರು ಅರ್ಜಿ ಸಲ್ಲಿಸೋಕೆ ಸರಳ ವಿಧಾನವಿದೆ. ಬಿಬಿಎಂಪಿ ಪಶುಪಾಲನ ವಿಭಾಗದಲ್ಲಿ ಅರ್ಜಿ ಪಡೆದು, ಹೆಸರು, ವಯಸ್ಸು, ನಾಯಿ ಕಚ್ಚಿದ ಸ್ಥಳದ ಜೊತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿವರಗಳನ್ನು ಅದಕ್ಕೆ ಸಂಬAಧಪಟ್ಟ ದಾಖಲಾತಿಗಳನ್ನು ನೀಡಬೇಕು.
ಬೀದಿ ನಾಯಿ ಕಡಿತದಿಂದ ಮಕ್ಕಳು ಪ್ರಾಣ ಕಳೆದುಕೊಂಡ್ರೆ ೫೦ ಸಾವಿರ ಪರಿಹಾರ ಮತ್ತು ವಯಸ್ಕರು ಪ್ರಾಣ ಕಳೆದುಕೊಂಡ್ರೆ ೧ ಲಕ್ಷ ಪರಿಹಾರವನ್ನು ಬಿಬಿಎಂಪಿ ನೀಡುತ್ತೆ. ಇಷ್ಟೆಲ್ಲಾ ಪರಿಹಾರ ಸರ್ಕಾರದ ಕಡೆಯಿಂದ ಸಿಕ್ತಾ ಇದ್ರೂ ಯಾಕೋ ಬೆಂಗಳೂರಿನ ಜನರಿಗೆ ಪರಿಹಾರ ಪಡ್ಕೊಳ್ಳೋಕೆ ಟೈಮ್ ಇಲ್ಲ. ಕಳೆದ ಏಳು ವರ್ಷದಲ್ಲಿ ಸಾವಿರಕ್ಕೆ ಒಬ್ಬರಂತೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಅಷ್ಟೇ. ಇನ್ನಾದರೂ ಬೀದಿ ನಾಯಿ ಕಡಿತಕ್ಕೊಳಗಾದವರು ಅದರ ಉಪಯೋಗ ಪಡೆದುಕೊಳ್ಳೋ ಹಾಗಾಗಲಿ ಅನ್ನೋದು ನಮ್ಮ ಆಶಯ

- Advertisement -

Latest Posts

Don't Miss