Sunday, September 8, 2024

Latest Posts

ನಾಯಕತ್ವ ಬದಲಾವಣೆ : ಗಂಗೂಲಿ ಅಸಮಾಧನ 

- Advertisement -

ಮುಂಬೈ: ನಾಯಕತ್ವ ಬದಲಾವಣೆ ವಿಚಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಅಸಮಾಧಾನಗೊಂಡಿದ್ದಾರೆ .ಕಳೆದ 7 ಸರಣಿಗಳಲ್ಲಿ  7 ನಾಯಕರು ಸೃಷ್ಟಿಯಾಗಿರುವುದು ಗಂಗೂಲಿ  ಕೋಪಕ್ಕೆ  ಕಾರಣವಾಗಿದೆ.

ರಾಹುಲ್ ದ್ರಾವಿಡ್ ತಂಡದ ಕೋಚ್ ಹುದ್ದೆ ಅಲಂಕರಿಸಿ 7 ತಿಂಗಳು ಕಳೆದಿವೆ. ಈ ಅವಯಲ್ಲಿ  ಭಾರತ 7 ಸರಣಿ 7 ನಾಯಕರು ಸೇವೆ ಸಲ್ಲಿಸಿದ್ದಾರೆ. ಇದೀಗ ಮುಂಬರುವ  ವೆಸ್ಟ್‍ಇಂಡೀಸ್ ವಿರುದ್ಧದ ಏಕದಿನ  ಸರಣಿಗೆ ಶಿಖರ್ ಧವನ್ ಅವರನ್ನು ನಾಯಕರನ್ನಾಗಿ ಕಣಕ್ಕಿಳಿಸಲಾಗುತ್ತಿದೆ. ಇದು ಬಿಸಿಸಿಐ ಅಧ್ಯಕ್ಷರಿಗೆ ಅಸಮಾಧಾನಕ್ಕೆ ಕಾರಣವಾಗಿದೆ.

ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿದೆ ನಿಜ. ಆದರೆ ಇದನ್ನೆ ರೂಢಿಸಿಕೊಂಡರೆ ತಂಡದ ಮೇಲೆ ಪರಿಣಾಮ ಬೀರುತ್ತೆ. ಮುಂದೆ ದೊಡ್ಡ ಟೂರ್ನಿಗಳಿರುವುದರಿಂದ ತಂಡಕ್ಕೆ ಇದು ಒಳ್ಳೆಯದಲ್ಲ.  ಈ ವಿಚಾರದಲ್ಲಿ ನಾವು ಅಸಹಾಯಕರಾಗಿದ್ದೇವೆ. ಇದು ನಿರ್ವಹಣೆ ವೇಳೆಯೂ ಪರಿಣಾಮ ಬೀರುತ್ತದೆ. ಆಟಗಾರರು ಪಿಟ್ನೆಸ್ ಕಡೆ ಗಮನ ನೀಡಲಿ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಫಿಟ್ನೆಸ್ ವಿಚಾರವಾಗಿ ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆ.ಎಲ್.ರಾಹುಲ್‍ಗೆ ಗಂಗೂಲಿ ಎಚ್ಚರಿಸಿದ್ದಾರೆ. ಫಿಟ್ನೆಸ್ ಸರಿಯಾಗಿ ಇದ್ದಿದ್ದರೆ ನಾಯಕತ್ವ ಬದಲಾವಣೆಯಾಗುತ್ತಿರಲಿಲ್ಲ ಎಂದಿದ್ದಾರೆ.

- Advertisement -

Latest Posts

Don't Miss