ಅಡುಗೆ ಮಾಡ್ಬೇಕಾದ್ರೆ Be careful: ಎಲ್ಲ ಮಹಿಳೆಯರು ನೋಡ್ಲೇಬೇಕಾದ ಸ್ಟೋರಿ!

ಪ್ರತಿ ಮಹಿಳೆಯರು ನೋಡಲೇ ಬೇಕಾದ ವಿಶೇಷ ಸ್ಟೋರಿ ಇದು. ಪ್ರತಿ ದಿನ ಅಡುಗೆ ಮಾಡಬೇಕಾದ್ರೇ ಬೀಕೇರ್ ಫುಲ್. ಅದ್ರಲ್ಲೂ ಅಡುಗೆ ಮಾಡುವಾಗ ಕುಕ್ಕರ್ ಬಳಸಬೇಕಾದ್ರೇ ಹುಷಾರ್. ಪ್ರತಿದಿನ ಅಡುಗೆ ಮಾಡುವಾಗ ವಿಶೇಷ ಗಮನ ನೀಡಬೇಕು. ಯಾಕಂದ್ರೆ ಅದಕ್ಕೆ ಉದಾಹರಣೆಯಾಗಿ ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿನ ಶ್ರೀಪ್ರಭು ಸ್ವಾಮಿಗಳ ಕಲ್ಮಠ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ.

ಅಡುಗೆ ಮಾಡುವಾಗ ಕುಕ್ಕರ್ ಸ್ಫೋಟವಾಗಿ, ವಿಶಾಲಾಕ್ಷಿ (40) ಎಂಬ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಘಟನೆಯಾಗಿದ್ದು, ಮಹಿಳೆಯ ಕೈಗೆ ಸುಟ್ಟು ಗಾಯಗಳಾಗಿದ್ದು, ದೇಹದ ಕೆಲ ಭಾಗಗಳಲ್ಲೂ ಬೊಬ್ಬೆಗಳೆದ್ದಿರುವುದು ದೃಢಪಟ್ಟಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.

ಶಾಲೆಯ ಆಡಳಿತ ಮಂಡಳಿಯವರು ತಕ್ಷಣ ಕ್ರಮ ಕೈಗೊಂಡು, ಗಾಯಾಳುವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ಪ್ರತಿದಿನ ಅಡುಗೆ ಮಾಡುವಾಗ ಕಿಚನ್‌ ಸುರಕ್ಷತೆಗೆ ಹೆಚ್ಚು ಗಮನ ನೀಡಬೇಕೆಂಬ ಜಾಗೃತಿ ಈ ಘಟನೆ ಮತ್ತೆ ಒತ್ತಿ ಹೇಳುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author